ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

2011ರ ಜನಗಣತಿ ಅಂತಿಮ ಪಟ್ಟಿ ಯಾವಾಗ?

Parashurama
Updated On : 29 Jan 2013, 12:10 pm

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕರ್ನಾಟಕದ 187 ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು 2011ರ ಜನಗಣತಿಯ ಅಂತಿಮ ಪಟ್ಟಿ ಮತ್ತು ವಾರ್ಡುವಾರು ಪಟ್ಟಿ ಯಾವಾಗ ಸಿದ್ಧವಾಗುತ್ತದೆ ಎಂಬ ಮಾಹಿತಿ ನೀಡುವಂತೆ ಜನಗಣತಿ ನಿರ್ದೇಶನಾಲಯದ ರಿಜಿಸ್ಟ್ರಾರ್ ಜನರಲ್‌ಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ನ್ಯಾ. ಟಿ.ಎಸ್. ಠಾಕೂರ್ ಮತ್ತು ನ್ಯಾ. ಮದನ್ ಬಿ. ಲೋಕೂರ್ ಅವರಿದ್ದ ನ್ಯಾಯಪೀಠ ಮುಂದಿನ  ವಿಚಾರಣೆಯನ್ನು ಫೆ.1ಕ್ಕೆ ಮುಂದೂಡಿದೆ. 2011ರ ಜನಗಣತಿ ಪ್ರಕಾರವೇ ರಾಜ್ಯದ 187 ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂದು ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠ, 2001ರ ಜನಗಣತಿಯಂತೆ ಚುನಾವಣೆ ನಡೆಸಬೇಕೆಂಬ ಚುನಾವಣಾ ಆಯೋಗದ ವಾದ ಮತ್ತು 2011ರ ಜನಗಣತಿಯಂತೆ ಚುನಾವಣೆ ನಡೆಸಬೇಕು ಎಂಬ ರಾಜ್ಯ ಸರ್ಕಾರದ ವಾದವನ್ನು ಆಲಿಸಿತು.
ಜನಗಣತಿ ನಿರ್ದೇಶನಾಲಯದ ಪರ ವಕೀಲರು ಹಾಜರಾಗದೇ ಇದ್ದುದರ ಬಗ್ಗೆ ರಾಜ್ಯ ಸರ್ಕಾರ ಪರ ವಕೀಲರು ಗಮನ ಸೆಳೆದು, ಅಂತಿಮಪಟ್ಟಿ ಮತ್ತು ವಾರ್ಡ್‌ವಾರು ಪಟ್ಟಿ ಯಾವಾಗ ಸಿದ್ಧವಾಗುತ್ತದೆಂಬ ಬಗ್ಗೆ ತುರ್ತಾಗಿ ಮಾಹಿತಿ ನೀಡಲು ನಿರ್ದೇಶಿಸಿ ನೋಟಿಸ್ ಜಾರಿಮಾಡುವಂತೆ ಕೋರಿಕೊಂಡರು. ಕೋರಿಕೆ ಮನ್ನಿಸಿದ ನ್ಯಾಯಪೀಠ ಶುಕ್ರವಾರ ಮಾಹಿತಿ ನೀಡುವಂತೆ ನಿರ್ದೇಶನ ನೀಡಿ ನೋಟಿಸ್ ಜಾರಿ ಮಾಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments