ಅಂತರಿಕ್ಷಕ್ಕೆ ಮಂಗ ಕಳುಹಿಸಿದ ಇರಾನ್!
ದುಬೈ: ಕ್ಷಿಪಣಿ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಇರಾನ್ ಸೋಮವಾರ ಜೀವಂತ ಮಂಗವೊಂದನ್ನು ಅಂತರಿಕ್ಷಕ್ಕೆ ಕಳುಹಿಸಿ ಬೆನ್ನುತಟ್ಟಿಕೊಂಡಿದೆ. ಇರಾನ್ನ ಈ ಪ್ರಯೋಗ ಪಾಶ್ಚಿಮಾತ್ಯ ರಾಷ್ಟ್ರಗಳ ತಲೆನೋವಿಗೆ ಕಾರಣವಾಗಿದ್ದು, ಈ ತಂತ್ರಜ್ಞಾನವನ್ನು ಅಣ್ವಸ್ತ್ರಗಳಿಗಾಗಿ ಬಳಸುವ ಆತಂಕ ಮನೆಮಾಡಿದೆ. ಆದರೆ, ಈ ಪ್ರಯೋಗವು ಅಂತರಿಕ್ಷ ತಂತ್ರಜ್ಞಾನ ಹಾಗೂ ಜೀವವಿಜ್ಞಾನ ಸಂಶೋಧನೆಯಲ್ಲಿ ಹೊಸ ಮೈಲಿಗಲ್ಲಾಗಿದೆ. ಈ ತಂತ್ರಜ್ಞಾನದಲ್ಲಿ ಕೆಲವೇ ಕೆಲವು ರಾಷ್ಟ್ರಗಳು ಏಕಸ್ವಾಮ್ಯ ಸಾಧಿಸಿವೆ. ಈಗ ಇರಾನ್ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವುದು ಮಹತ್ವದ ಸಾಧನೆಯಾಗಿದೆ ಎಂದು ಸರ್ಕಾರದ ಮಾಧ್ಯಮಗಳು ತಿಳಿಸಿವೆ. ಮಂಗನನ್ನು ಹೊತ್ತುಕೊಂಡು 120 ಕಿ.ಮೀ.ಗಿಂತಲೂ ಹೆಚ್ಚು ಎತ್ತರ ತಲುಪಿದ ಕವೊಷ್ಗರ್ ರಾಕೆಟ್ ನಂತರ ಮಂಗವನ್ನು ಸುರಕ್ಷಿತವಾಗಿ ಧರೆಗೆ ಕರೆತಂದಿತು. ಕವೊಷ್ಗರ್ನ ಉಡ್ಡಯನವು ಮನುಷ್ಯನನ್ನು ಅಂತರಿಕ್ಷಕ್ಕೆ ಕಳುಹಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ ಎಂದು ರಕ್ಷಣಾ ಸಚಿವ ಅಹಮದ್ ವಾಹಿದಿ ಅಭಿಪ್ರಾಯಪಟ್ಟಿದ್ದಾರೆ. ಇರಾನ್ 2011ರಲ್ಲಿ ಮಂಗವನ್ನು ಅಂತರಿಕ್ಷಕ್ಕೆ ಕಳುಹಿಸುವ ಯೋಜನೆ ಘೋಷಿಸಿತ್ತು. ಆದರೆ, ಆಗ ಆ ಪ್ರಯತ್ನ ವಿಫಲವಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.