ಕ್ಷಿಪಣಿ ಪರೀಕ್ಷೆಯಶಸ್ವಿಯಾದಾಗ ಕಣ್ಣೀರಿಟ್ಟ ಚಕ್ರವರ್ತಿ
ಬಂಗಾಳಕೊಲ್ಲಿ: ಭಾನುವಾರವಷ್ಟೇ ಬಂಗಾಳಕೊಲ್ಲಿಯಲ್ಲಿ ಸಮುದ್ರದಾಳದಿಂದ ಸಬ್ಮರೀನ್ ಆಧಾರಿತ ಛೇದನಾ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿ ನೆರವೇರುತ್ತಿದ್ದಂತೆ ಇತ್ತ ಕ್ಷಿಪಣಿಯ ವಿನ್ಯಾಸಕಾರ ಎ.ಕೆ. ಚಕ್ರವರ್ತಿ ಅವರ ಕಣ್ಣಾಲಿಗಳು ತುಂಬಿದವು.
ಹೌದು. ಹೈದರಾಬಾದ್ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ ನಿರ್ದೇಶಕರಾಗಿರುವ ಚಕ್ರವರ್ತಿ ಅವರು ಈ ಕ್ಷಿಪಣಿಯ ಪರೀಕ್ಷೆಗಾಗಿಯೇ ಕಾದು ಕುಳಿತಿದ್ದರು. ಏಕೆಂದರೆ, ಕ್ಷಿಪಣಿ ಪರೀಕ್ಷೆ ಮುಗಿದ ಬಳಿಕ ಅವರು ನಿವೃತ್ತಿ ಹೊಂದುವವರಿದ್ದರು. ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗುತ್ತಿದ್ದಂತೆಯೇ ಯುವವಿಜ್ಞಾನಿಗಳ ತಂಡವು ಚಕ್ರವರ್ತಿ ಅವರನ್ನು ತಮ್ಮ ಹೆಗಲ ಮೇಲೇರಿಸಿಕೊಂಡು ಕುಣಿದಾಡಿದರು. ಈ ವೇಳೆ ಮಾತನಾಡಿದ ಚಕ್ರವರ್ತಿ ಅವರು, 'ನನ್ನ ಕಣ್ಣಲ್ಲಿ ಬರುತ್ತಿರುವುದು ಸಂತೋಷದ ಕಣ್ಣೀರು' ಎಂದರು. ತಾನು ಕ್ಷಿಪಣಿ ವಿನ್ಯಾಸದ ಕಲೆಯನ್ನು ಕಲಿತಿದ್ದು ಭಾರತದ ಕ್ಷಿಪಣಿ ಮಾನವ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ. ಅವರಿಗೆ ನಾನು ಎಂದೆಂದೂ ಆಭಾರಿ ಎಂದೂ ನುಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.