ನೊಬೆಲ್ಗೆ ಸಮನಾದ 'ಟಾಂಗ್ ಪ್ರಶಸ್ತಿ' ಆರಂಭ
ತೈಪೆ: ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಸಮನಾದ ಏಷ್ಯನ್ ಪ್ರಶಸ್ತಿಯೊಂದು ಬಂದಿದೆ. ಅದರ ಹೆಸರು 'ಟಾಂಗ್ ಪ್ರಶಸ್ತಿ'. ತೈವಾನ್ನ ರೂಯಿಂಟೆಕ್ಸ್ ಉದ್ಯಮ ಸಾಮ್ರಾಜ್ಯದ ಅಧಿಪತಿಯಾಗಿರುವ ಸ್ಯಾಮ್ಯುವೆಲ್ ಯಿನ್ ಎಂಬುವರು ಟಾಂಗ್ ಪ್ರಶಸ್ತಿಗಾಗಿ ಬರೋಬ್ಬರಿ 545 ಕೋಟಿಯನ್ನು ದೇಣಿಗೆಯಾಗಿ ನೀಡಿದ್ದಾನೆ.
ನೊಬೆಲ್ಗೆ ಸಮನಾದ ಪ್ರಶಸ್ತಿಗೆ ಇಷ್ಟೊಂದು ಮೊತ್ತವನ್ನು ನೀಡುವ ಮೂಲಕ ನನ್ನ ಎಷ್ಟೋ ದಿನಗಳ ಕನಸು ನನಸಾಗಿದೆ ಎಂದಿದ್ದಾರೆ ಯಿನ್. 2014ರಿಂದ ಪ್ರತಿ 2 ವರ್ಷಗಳಿಗೊಮ್ಮೆ ಈ ಪ್ರಶಸ್ತಿಯನ್ನು ನೀಡಲು ಆರಂಭಿಸಲಾಗುತ್ತದೆ. ಸುಸ್ಥಿರ ಅಭಿವೃದ್ಧಿ, ಬಯೋಫಾರ್ವಾಸ್ಯುಟಿಕಲ್ ಸೈನ್ಸ್, ಸಿನೋಲಜಿ ಹಾಗೂ ರೂಲ್ ಆಫ್ ಲಾ ಎಂಬ 4 ವಿಭಾಗಗಳಲ್ಲಿ ಗಣನೀಯ ಕೊಡುಗೆ ನೀಡಿದ ಯಾವುದೇ ರಾಷ್ಟ್ರದ ವ್ಯಕ್ತಿಗೂ ಪ್ರಶಸ್ತಿ ನೀಡಲಾಗುತ್ತದೆ.
ಟಾಂಗ್ ಪ್ರಶಸ್ತಿ ವಿಜೇತರಿಗೆ 9.10 ಕೋಟಿ ನಗದು ಬಹುಮಾನ ಸಿಗಲಿದೆ. ನೊಬೆಲ್ ಪ್ರಶಸ್ತಿಗೆ ಸಿಗುವ ನಗದು 6.40 ಕೋಟಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.