ಮೊಬೈಲ್ ಸ್ವಿಚ್ ಆಫ್ ಆದ್ರೆ ಖುಷಿ!
ಜೀವನದಲ್ಲಿ ಸಂತೋಷವಾಗಿರಬೇಕೆಂದರೆ ಏನು ಮಾಡಬೇಕು?
ಕೋಟಿಗಟ್ಟಲೆ ಸಂಪಾದಿಸಬೇಕು, ವಿಶ್ವವೆಲ್ಲ ಸುತ್ತಬೇಕು, ಬೇಕಾದ್ದನ್ನೆಲ್ಲ ಖರೀದಿಸಬೇಕು... ಹೀಗೆ ನೀವು ಪಟ್ಟಿ ಮಾಡುತ್ತಿದ್ದೀರಾ? ಮನಸ್ಸಿಗೆ ಸಂತೋಷ ಬೇಕೆಂದರೆ ಇದನ್ನೆಲ್ಲ ಮಾಡಬೇಕಾಗಿಲ್ಲ. ಕೇವಲ ನಿಮ್ಮ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿದರೆ ಮುಗೀತು. ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ನ ಪ್ರೊಫೆಸರ್ವೊಬ್ಬರು ಈ ಸಂತೋಷದ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಟ್ಟರೆ, ಪದೇ ಪದೆ ಬರುವ ಕರೆಗಳ ಕಿರಿಕಿರಿಯೂ ಇರುವುದಿಲ್ಲ. ಸಂದೇಶ, ಸಂಗೀತ, ಇ-ಮೇಲ್ ಅಂತ ಮೊಬೈಲ್ ಹಿಂದೆ ಬೀಳುವುದು ತಪ್ಪುತ್ತದೆ. ಆಗ ಅನಿವಾರ್ಯವಾಗಿ ನೀವು ಗೆಳೆಯರ ಜತೆ, ಕುಟುಂಬ ಸದಸ್ಯರೊಡನೆ ಮಾತನಾಡಲು, ಸುತ್ತಾಡಲು ಆರಂಭಿಸುತ್ತೀರಿ. ನಿಮ್ಮ ಇಷ್ಟದ ಚಟುವಟಿಕೆಗಳನ್ನು, ಹವ್ಯಾಸಗಳನ್ನು ಮತ್ತೊಮ್ಮೆ ಮೈಗೂಡಿಸಿಕೊಳ್ಳುತ್ತೀರಿ. ಆಗ ಸಹಜವಾಗಿ ಖುಷಿ ನಿಮ್ಮ ಪಾಲಾಗುತ್ತದೆ ಎನ್ನುವುದು ಪ್ರೊ. ಪೌಲ್ ಡೋಲನ್ ಅವರ ಅಭಿಪ್ರಾಯ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.