ಬ್ಲ್ಯಾಕ್ ಫೇಸ್: ಖಾಸಗಿ ಬ್ಯಾಂಕುಗಳ ಪರ ಆರ್ ಬಿಐ
ಕಪ್ಪು ಹಣವನ್ನು ಬಿಳಿಯನ್ನಾಗಿಸುವ ದಂಧೆಗೆ...
ಮುಂಬೈ: ಕಪ್ಪು ಹಣವನ್ನು ಬಿಳಿಯನ್ನಾಗಿಸುವ ದಂಧೆಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಖಾಸಗಿ ಬ್ಯಾಂಕುಗಳ ಪರವಾಗಿ ನಿಂತಿದೆ.
ಐಸಿಐಸಿಐ, ಎಚ್ಡಿಎಫ್ಸಿ ಹಾಗೂ ಆ್ಯಕ್ಸಿಸ್ ಬ್ಯಾಂಕುಗಳು ಇಂತಹ ಅವ್ಯವಹಾರ ನಡೆಸುತ್ತಿವೆ ಎಂದು ಕೋಬ್ರಾಪೋಸ್ಟ್ ಎಂಬ ಆನ್ಲೈನ್ ಪೋರ್ಟಲ್ ಕಳೆದ ವಾರವಷ್ಟೇ ಆರೋಪ ಹೊರಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆರ್ಬಿಐ ಉಪ ಗವರ್ನರ್ ಕೆ.ಸಿ. ಚಕ್ರವರ್ತಿ, ಖಾಸಗಿ ಬ್ಯಾಂಕುಗಳ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ. ಅಂತಹ ಒಂದೇ ಒಂದು ವಹಿವಾಟು ಕೂಡ ನಡೆದಿಲ್ಲ. ಕೆವೈಸಿ ಉಲ್ಲಂಘನೆಯು ಯಾವುದೇ ವ್ಯವಸ್ಥೆಯಲ್ಲೂ ಆಗಬಹುದು. ಆದರೆ, ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದರು.
ಅಷ್ಟೇ ಅಲ್ಲದೆ, ಭಾರತದಲ್ಲಿ ಕಪ್ಪು ಹಣ ಬಿಳಿಯನ್ನಾಗಿಸುವುದನ್ನು ತಡೆಯುವ ವ್ಯವಸ್ಥೆಯು ಪರ್ಫೆಕ್ಟ್ ಆಗಿದೆ. ಹಾಗಾಗಿ ಸುಮ್ಮನೆ ನಮ್ಮನ್ನು ನಾವೇ ಕೆಳದರ್ಜೆಗಿಳಿಸುವುದು ಬೇಡ ಎಂದೂ ಚಕ್ರವರ್ತಿ ಸಲಹೆ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.