ದೆಹಲಿ ಗ್ಯಾಂಗ್ರೇಪ್ ವಿಚಾರಣೆ ವರದಿಗೆ ಮಾಧ್ಯಮಗಳಿಗೆ ಅಸ್ತು
ನವದೆಹಲಿ: ಡಿ.16ರ ದೆಹಲಿ ಗ್ಯಾಂಗ್ರೇಪ್ ಪ್ರಕರಣ ಸಂಬಂಧದ ವಿಚಾರಣೆಯ ವಿವರ ವರದಿ ಮಾಡುವಲ್ಲಿ ಮಾಧ್ಯಮಗಳಿಗಿದ್ದ ಅಡ್ಡಿ ದೂರವಾಗಿದೆ. ಸಾಕೇತ್ನ ತ್ವರಿತಗತಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ದೈನಂದಿನ ವಿಚಾರಣೆಯ ವರದಿ ಪ್ರಕಟಣೆಗೆ ಮಾಧ್ಯಮಗಳಿಗೆ ಅವಕಾಶ ನೀಡಿ ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.
ರಹಸ್ಯವಾಗಿ ನಡೆಯುತ್ತಿದ್ದ ವಿಚಾರಣೆಗೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಆದೇಶವನ್ನು ಹೈಕೋರ್ಟ್ ತಳ್ಳಿಹಾಕಿದೆ. ಮಾನ್ಯತೆ ಪಡೆದಿರುವ ರಾಷ್ಟ್ರೀಯ ದೈನಿಕಗಳ ತಲಾ ಒಬ್ಬ ಪ್ರತಿನಿಧಿಗೆ ವಿಚಾರಣೆಯ ವರದಿ ಮಾಡಲು ಅವಕಾಶ ನೀಡುವಂತೆ ಆದೇಶಿಸಿದೆ. ಪಿಟಿಐ, ಯುಎನ್ಐ ಹಾಗೂ ಇತರೆ ರಾಷ್ಟ್ರೀಯ ದೈನಿಕದ ವರದಿಗಾರರು ನಂತರ ಸುದ್ದಿಯನ್ನು ಸ್ಥಳೀಯ ಪತ್ರಿಕೆಗಳು, ಮಾಧ್ಯಮಗಳ ಪ್ರತಿನಿಧಿಗಳಿಗೆ ಹಂಚಬೇಕು ಎಂದೂ ಕೋರ್ಟ್ ಸೂಚಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.