ದತ್ಗೆ ಕ್ಷಮೆ ನೀಡಲು ಸಾಧ್ಯವೇ ಇಲ್ಲ: ಮಹೇಶ್ ಜೇಠ್ಮಲಾನಿ
ಬಾಲಿವುಡ್ ನಟ ಹಾಗೂ 1993ರ ಮುಂಬೈ...
ನವದೆಹಲಿ: ಬಾಲಿವುಡ್ ನಟ ಹಾಗೂ 1993ರ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್ಗೆ ಕ್ಷಮಾದಾನ ಸಿಗಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ನಾಯಕ ಮತ್ತು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಹೇಳಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಮತ್ತು ಪತ್ರಿಕಾ ಮಂಡಳಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಅವರು ಮಹಾರಾಷ್ಟ್ರ ರಾಜ್ಯಪಾಲರಿಗೆ ಸಂಜಯ್ ದತ್ ಕ್ಷಮೆಗೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ. ಆದರೆ ಯಾವ ನೆಲೆಗಟ್ಟಿನಲ್ಲಿ ಈ ಮನವಿ ಮಾಡಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಸಂಜಯ್ ದತ್ಗೆ ಯಾವ ರೀತಿಯಲ್ಲಿ ಕ್ಷಮೆ ನೀಡಲು ಸಾಧ್ಯ ಎಂದು ಜೇಠ್ಮಲಾನಿ ಪ್ರಶ್ನಿಸಿದ್ದಾರೆ. ಇದೇ ವೇಳೆ ಸಂಜಯ್ ದತ್ ಕ್ಷಮಾದಾನಕ್ಕಾಗಿ ಸಕಲ ರೀತಿಯಲ್ಲೂ ಯತ್ನಿಸುವುದಾಗಿ ಸಹೋದರಿ ಪ್ರಿಯಾ ದತ್ ಹೇಳಿದ್ದಾರೆ. ದತ್ ಅವರ ಸಹೋದರಿಯಾಗಿ ಮತ್ತು ಕುಟುಂಬಸ್ಥಳಾಗಿ ಈ ಪ್ರಯತ್ನ ಮಾಡಲೇಬೇಕು ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.