ಮುಷರ್ರಫ್ ವಿರುದ್ಧ ಆತ್ಮಾಹುತಿ ದಾಳಿ: ತಾಲಿಬಾನ್ ಎಚ್ಚರಿಕೆ
ಇಸ್ಲಾಮಾಬಾದ್: ನಾಲ್ಕು ವರ್ಷಗಳ ಕಾಲ ರಾಜಕೀಯದಿಂದ ದೂರ ಉಳಿದಿದ್ದ ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಭಾನುವಾರ ಪಾಕಿಸ್ತಾನಕ್ಕೆ ಹಿಂತಿರುಗಲಿದ್ದಾರೆ. ಆದರೆ, ಮುಷರ್ರಫ್ ಏನಾದರೂ ಪಾಕ್ಗೆ ಕಾಲಿಟ್ಟರೆ ಅವರಿಗೆ ನರಕದರ್ಶನ ಮಾಡಿಸುವುದಾಗಿ ತಾಲಿಬಾನ್ ಎಚ್ಚರಿಸಿದೆ.
ಸದ್ಯ ದುಬೈನಲ್ಲಿ ನೆಲೆಸಿರುವ ಮುಷರ್ರಫ್ ಮೇ ತಿಂಗಳಲ್ಲಿ ಪಾಕ್ನಲ್ಲಿ ನಡೆಯಲಿರುವ ಮುಖ್ಯ ಚುನಾವಣೆ ಹಿನ್ನೆಲೆಯಲ್ಲಿ ದೇಶಕ್ಕೆ ಹಿಂತಿರುಗುತ್ತಿದ್ದಾರೆ. ಆದರೆ, ಇದಕ್ಕೆ ತೆಹ್ರಿಕ್- ಇ- ತಾಲಿಬಾನ್ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ತಾಲಿಬಾನ್ಗೆ ಮುಷರ್ರಫ್ ಶರಣಾಗಬೇಕು, ಇಲ್ಲದಿದ್ದರೆ ಆತ್ಮಾಹುತಿ ದಾಳಿ ಮೂಲಕ ಅವರ ಹತ್ಯೆ ಮಾಡಲಾಗುವುದು ಎಂದು ಸಂಘಟನೆಯ ವಕ್ತಾರ ಇಹಸಾನುಲ್ಲಾ ತಿಳಿಸಿದ್ದಾನೆ
ಅಲ್ಲದೆ, ಮುಷರ್ರಫ್ ಹತ್ಯೆಗಾಗಿಯೇ ವಿಶೇಷ ಆತ್ಮಹತ್ಯಾ ದಳವನ್ನೂ ಸಿದ್ಧಪಡಿಸಲಾಗಿದೆ ಎಂದು ಇಹಸಾನುಲ್ಲಾ ಎಚ್ಚರಿಸಿದ್ದಾನೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.