ವಾಕ್ WAR
ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ಅವರನ್ನು ಭಯೋತ್ಪಾದಕ ಎಂದು ಕರೆದ ಉಕ್ಕು ಸಚಿವ ಬೇಣಿ ಪ್ರಸಾದ್ ಹೇಳಿಕೆಗೆ ಮುಲಾಯಂ ಅವರು ತಿರುಗೇಟು ನೀಡಿದ್ದು ಹೀಗೆ.
ಬೇಣಿ ಪ್ರಸಾದ್ ವರ್ಮಾ: ನನ್ನ ಪ್ರಕಾರ ಬಾಬರಿ ಮಸೀದಿ ಕೆಡವಿದ್ದು ಹಾಗೂ ಗುಜರಾತ್ ಹಿಂಸಾಚಾರ ಎರಡೂ ಭಯೋತ್ಪಾದನಾ ಕೃತ್ಯಗಳೇ ಆಗಿವೆ. ಮಸೀದಿ ಕೆಡವಲು ನೆರವಾದ ಕಲ್ಯಾಣ್ ಸಿಂಗ್ರಂಥವರ ಜತೆ ಮುಲಾಯಂ ಕೈಜೋಡಿಸಿದ್ದಾರೆ.
ಮುಲಾಯಂ ಸಿಂಗ್ ಯಾದವ್: ನನ್ನನ್ನು ಉಗ್ರಗಾಮಿ ಎಂದು ಕರೆಯಲಾಗಿದೆ. ನಾನು ಉಗ್ರಗಾಮಿ ಎನ್ನುವುದು ಸಾಬೀತಾದರೆ ನನ್ನನ್ನು ಸರ್ಕಾರ ಜೈಲಿಗೆ ಕಳುಹಿಸಲಿ. ಇಲ್ಲದಿದ್ದರೆ ಬೇಣಿ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು.
ನಿತೀಶ್ ಕುಮಾರ್: ಬಿಹಾರದ ಬಗ್ಗೆ ಕೇಂದ್ರ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದರ ಪ್ರತಿಫಲ 2014ರ ಚುನಾವಣೆ ವೇಳೆ ದಕ್ಕಲಿದೆ. ಈಗಲೇ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿ. ಇಲ್ಲದಿದ್ದರೆ 2014ರಲ್ಲಿ ಅದನ್ನು ನಾವು ಪಡೆದೇ ತೀರುತ್ತೇವೆ.
ಶಕೀಲ್ ಅಹ್ಮದ್: ವಿಶೇಷ ಸ್ಥಾನಮಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ. ಎನ್ಡಿಎ ಅಧಿಕಾರದಲ್ಲಿದ್ದಾಗ ಬಿಹಾರವನ್ನು ಎಷ್ಟು ತುಚ್ಛವಾಗಿ ನೋಡಲಾಯಿತು ಎಂಬುದು ಗೊತ್ತಿಲ್ಲವೇ? ಬಿಜೆಪಿ ನೇತೃತ್ವದ ಮಿತ್ರಪಕ್ಷಗಳು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡದಂತೆ ಮಾಡಿರಲಿಲ್ಲವೇ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.