ಸುದ್ದಿ ಮುನ್ನೋಟ
ವಿಜಯ ಸಂಕಲ್ಪ ಯಾತ್ರೆ
ಶಿವಮೊಗ್ಗದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ. ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಉಪಮುಖ್ಯಮಂತ್ರಿ ಈಶ್ವರಪ್ಪ, ಮಾಜಿ ಸಿಎಂ ಸದಾನಂದ ಗೌಡ ಉಪಸ್ಥಿತಿ.
ರಂಗ ಸಮ್ಮಾನ್ ಪ್ರಶಸ್ತಿ
ಕಾಂತಾವರ ಕನ್ನಡ ಸಂಘದ ಆಶ್ರಯದಲ್ಲಿ ಸ್ವರ್ಣ ಕಮಲ ಪುರಸ್ಕೃತ ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ
ಪಾಕಿಸ್ತಾನಕ್ಕೆ ಮುಷರ್ರಫ್
ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರ್ರಫ್ 4 ವರ್ಷಗಳ ನಂತರ ಸ್ವದೇಶಕ್ಕೆ ಆಗಮನ. ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜ.ಮುಷರ್ರಫ್ ಭೇಟಿಗೆ ಹೆಚ್ಚಿನ ಮಹತ್ವ.
ಮಲೇಷ್ಯನ್ ಗ್ರಾನ್ ಪ್ರಿ
ಮಲೇಷ್ಯಾ ರಾಜಧಾನಿ ಕೌಲಾಲಂಪುರದಲ್ಲಿ ಬಹು ನಿರೀಕ್ಷಿತ ಗ್ರಾನ್ ಪ್ರಿ ಆರಂಭ
ಏಕದಿನ ಕ್ರಿಕೆಟ್ ಪಂದ್ಯ
ದಕ್ಷಿಣ ಆಫ್ರಿಕದ ಬೆನೋನಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ಐದನೇ ಏಕದಿನ ಪಂದ್ಯ
ಕ್ವಾರ್ಟರ್ ಫೈನಲ್ ಕ್ರಿಕೆಟ್ ಪಂದ್ಯ
ಇಂದೋರ್‌ನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಕ್ವಾರ್ಟರ್ ಫೈನಲ್ ಕ್ರಿಕೆಟ್ ಪಂದ್ಯ
ವರಿಷ್ಠ ಮಂಡಳಿ ಸಭೆ
ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ನವದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠ ಮಂಡಳಿ 2 ದಿನಗಳ ಸಭೆ.
ಹೋಳಿ ಹಬ್ಬ
ದೇಶಾದ್ಯಂತ ಬಣ್ಣಗಳ ಹಬ್ಬ ಆಚರಣೆ. ಬಣ್ಣದ ಓಕುಳಿ ಆಡಲಿರುವ ಯುವಕ, ಯುವತಿಯರು. ಕಾಮದಹನ ಸಂಭ್ರಮ
ವಿಶ್ವರಂಗಭೂಮಿ ದಿನಾಚರಣೆ
ರಂಗಾಯಣ ಶಿವಮೊಗ್ಗ ಮತ್ತು ಕಲಾವಿದರು ಒಕ್ಕೂಟದಿಂದ 'ವಿಶ್ವರಂಗಭೂಮಿ' ದಿನಾಚರಣೆ ಕಾರ್ಯಕ್ರಮ.
ರಾಷ್ಟ್ರೀಯ ಬೀಚ್ ವಾಲಿಬಾಲ್
ವಿಶಾಖಪಟ್ಟಣದಲ್ಲಿ ನಾಲ್ಕು ದಿನಗಳ ರಾಷ್ಟ್ರೀಯ ಬೀಚ್ ವಾಲಿಬಾಲ್ ಪಂದ್ಯಾವಳಿ. ವಿವಿಧ ರಾಜ್ಯಗಳ ಕ್ರೀಡಾಪಟುಗಳು ಭಾಗಿ.
ಶುಭ ಶುಕ್ರವಾರ
ವಿಶ್ವಾದ್ಯಂತ ಗುಡ್‌ಫ್ರೈಡೆ ಆಚರಣೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.