ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾಂಗ್ರೆಸ್ ನಂಬಲರ್ಹ ಪಕ್ಷ ಅಲ್ಲ: ಮುಲಾಯಂ ಸಿಂಗ್

'ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅನ್ನು...

Parashurama
Updated On : 28 Mar 2013, 1:31 am

ಇಟಾವಾ: 'ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅನ್ನು ನಂಬಲು ಸಾಧ್ಯವಿಲ್ಲ'
- ಹೀಗೆಂದು ಗುಡುಗಿದ್ದು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್.
ಉತ್ತರಪ್ರದೇಶದ ತಮ್ಮ ಸ್ವಗ್ರಾಮ ಸೈಫಿ ಎಂಬಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಆ ಪಕ್ಷ ಜನರನ್ನು ಜಾಣತನದಿಂದಲೇ ಮೋಸ ಮಾಡುತ್ತಾ ಬರುತ್ತಿದೆ ಎನ್ನುವುದು ಮುಲಾಯಂ ಅವರ ಆರೋಪ.
'ಈ ಹಿಂದೆ ಚುನಾವಣೆ ಬರುತ್ತದೆ ಎನ್ನುವಾಗ ರೈತರ ಸಾಲ ಮನ್ನಾ ಮಾಡಿ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಿತು. ಈ ಬಾರಿಯೂ ಅದೇ ನೀತಿಯನ್ನು ಪಕ್ಷ ಅನುಸರಿಸಲಿದೆ. ಅವರು ಜಾಣತನದಿಂದಲೇ ಜನರಿಗೆ ಮೋಸ ಮಾಡುತ್ತಾರೆ' ಎಂದರು.
  ಆದರೆ ಈ ಬಾರಿ ಜನರು ಕಾಂಗ್ರೆಸ್‌ನ ಗಿಲೀಟು ತಂತ್ರಗಳಿಗೆ ಮರುಳಾಗಲಾರರು ಎಂದರು.
ತೃತೀಯ ರಂಗದ್ದೇ ಸರ್ಕಾರ: 2014ರಲ್ಲಿ ತೃತೀಯ ರಂಗದ್ದೇ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಬೇಕೆನ್ನುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments