'ಕಾರ್ಗಿಲ್ ಕಾರ್ಯಾಚರಣೆ ಕುರಿತು ಹೆಮ್ಮೆಯಿದೆ'
ಇಸ್ಲಾಮಾಬಾದ್/ಕರಾಚಿ: ಕಾರ್ಗಿಲ್ ಕಾರ್ಯಾಚರಣೆ ಬಗ್ಗೆ ತಮಗೆ ಹೆಮ್ಮೆ ಇದೆ ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜ.ಪರ್ವೇಜ್ ಮುಷರ್ರಫ್ ಹೇಳಿಕೊಂಡಿದ್ದಾರೆ. ಸರ್ವಾಧಿಕಾರಿಯಾಗಿ ತಾವು ಕೈಗೊಂಡ ನಿರ್ಧಾರಗಳನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡ ಅವರು, ದೇಶ ತಮ್ಮ ಅಧಿಕಾರದ ಅವಧಿಯಲ್ಲಿ 'ಅಭಿವೃದ್ಧಿ ಕಂಡಿತ್ತು' ಎಂದರು.
4 ವರ್ಷ ಸ್ವಯಂಪ್ರೇರಿತನಾಗಿ ದೇಶ ಬಿಟ್ಟಿದ್ದ್ದೆ. ಮರಳಿ ಸ್ವದೇಶಕ್ಕೆ ಹಿಂತಿರುಗಲು ಯಾರ ಜತೆಯೂ ಒಪ್ಪಂದ ಮಾಡಿಕೊಂಡಿಲ್ಲ ಎಂದು ಮುಷರ್ರಫ್ ಪ್ರತಿಪಾದಿಸಿದರು. 'ದೇಶ ಮತ್ತು ಜನರ ಹಿತಕ್ಕಾಗಿ ನಾನು ಪಾಕಿಸ್ತಾನಕ್ಕೆ ಮರಳಿದ್ದೇನೆ' ಎಂದು ಪ್ರತಿಪಾದಿಸಿದ ಮಾಜಿ ಸರ್ವಾಧಿಕಾರಿ ತಮ್ಮ ನೇತೃತ್ವದ ಅಖಿಲ ಪಾಕಿಸ್ತಾನ ಮುಸ್ಲಿಮ್ ಲೀಗ್ ಮೇ 11ರಂದು ನಡೆಯುವ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂದು ಊಹಿಸಲೂ ಸಾಧ್ಯವಿಲ್ಲ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.