ಬ್ರಿಟನ್‌ಗೀಗ ಜೈವಿಕ ಯುದ್ಧದ ಭೀತಿ!
ಲಂಡನ್: ಉಗ್ರರ ಹಿಟ್‌ಲಿಸ್ಟ್‌ನಲ್ಲಿರುವ ಬ್ರಿಟನ್‌ನಲ್ಲೀಗ ಜೈವಿಕ ಯುದ್ಧದ ಆತಂಕ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಸಾಕಷ್ಟು ಔಷಧಿಗಳನ್ನು ಸಂಗ್ರಹಿಟ್ಟುಕೊಳ್ಳುವ ಕೆಲಸ ಆರಂಭಿಸಿದೆ. ನಗರದ ಪ್ರಮುಖ ಕೇಂದ್ರಗಳು ಹಾಗೂ ರೇಲ್ವೆ ನಿಲ್ದಾಣಗಳ ಮೇಲೆ ಉಗ್ರರು ವೈರಸ್‌ಗಳು, ಬ್ಯಾಕ್ಟೀರಿಯಾಗಳನ್ನು ಬಿಡುಗಡೆ ಮಾಡಬಹುದು. ಲಕ್ಷಾಂತರ ಮಂದಿ ಜೀವಕ್ಕೆ ಕುತ್ತು ತಂದೊಡ್ಡಬಹುದು ಎನ್ನುವ ಆತಂಕವನ್ನು ಅಲ್ಲಿನ ಭದ್ರತಾ ಸಂಸ್ಥೆಗಳು ಹೊರಹಾಕಿವೆ. ಇದಲ್ಲದೆ ಮುಂಬೈ ಮಾದರಿಯ ದಾಳಿ ಹಾಗೂ ಪ್ರಯಾಣಿಕರ ವಿಮಾನ ಹೊಡೆದುರುಳಿಸಲು ಕ್ಷಿಪಣಿಗಳನ್ನು ಬಳಸುವ ಸಾಧ್ಯತೆಯೂ ಇಲ್ಲದಿಲ್ಲ ಎಂದು ಭದ್ರತಾ ಸಂಸ್ಥೆಗಳು ಸಂಸದರಿಗೆ ಸಲ್ಲಿಸಿರುವ ವರದಿಯಲ್ಲಿ ಎಚ್ಚರಿಕೆ ನೀಡಿವೆ. ಜೈವಿಕ ಯುದ್ಧದ ಬೆದರಿಕೆಯ ಸ್ವರೂಪದ ಕುರಿತು ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ಆದರೆ, ಪ್ರಾಣಾಪಾಯ ತಂದೊಡ್ಡಬಹುದಾದ ಸಿಡುಬಿನಂಥ ರೋಗಗಳಿಗೆ ಕಾರಣವಾಗುವ ವೈರಸ್ ಅಥವಾ ಬ್ಯಾಕ್ಟೀರಿಯಾಗಳನ್ನು ಉಗ್ರರು ಹರಡಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.