ಹೋಳಿ ನೈಸರ್ಗಿಕ ಬಣ್ಣಕ್ಕೆ ಜೈ ಹೇಳಿ
ಹೋಳಿ ಬಂದೇ ಬಿಡ್ತು. ಹೋಳಿ ದಿನ ಮಕ್ಕಳು, ಹಿರಿಯರೆನ್ನದೆ ಎಲ್ಲರೂ ಸೇರಿಕೊಂಡು ಬಣ್ಣದೋಕುಳಿ ಆಡುವ ಖುಷಿಯೇ ಬೇರೆ. ಆದರೆ, ಈ ಸಂತಸದ ಹಬ್ಬವನ್ನು ಚರ್ಮ ಹಾಗೂ ಪರಿಸರಕ್ಕೆ ಹಾನಿಕಾರಕ ವಿಷಕಾರಿ ರಾಸಾಯನಿಕ ಬಣ್ಣ ಬಳಸಿಯೇ ಆಡಬೇಕೇ? ಬೇಡ ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ ನೈಸರ್ಗಿಕ ಬಣ್ಣ ತಯಾರಿಸಲು ಇಲ್ಲಿದೆ ಒಂದಷ್ಟು ಸರಳ ಉಪಾಯ.
ಹಸಿರು
ಒಣ ಬಣ್ಣ
ಹೋಳಿಗಾಗಿ ನೈಸರ್ಗಿಕವಾಗಿ ಹಸಿರು ಬಣ್ಣದ ಪುಡಿ ತಯಾರಿಸುವುದು ಕಷ್ಟವೇನಲ್ಲ. ಹೀನಾ(ಮೆಹಂದಿ) ಪೌಡರ್ ಅನ್ನು ಅಷ್ಟೇ ಪ್ರಮಾಣದ ಹಿಟ್ಟಿನೊಂದಿಗೆ ಮಿಶ್ರಣ ಮಾಡಿದರೆ ಹಸಿರು ಬಣ್ಣ ರೆಡಿ. ಅಲ್ಲದೆ, ಹೋಳಿಯಾಟದ ಬಳಿಕ ಈ ಬಣ್ಣ ತೆಗೆಯುವುದೂ ಸುಲಭ. ಬ್ರೆಶ್ ಅಥವಾ ಬಟ್ಟೆ ಬಳಸಿ ಈ ಬಣ್ಣ ಮೈಗೆ ಮೆತ್ತಿಕೊಳ್ಳದಂತೆ ನೋಡಿಕೊಳ್ಳಬಹುದು. ಆದರೆ, ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ನೀರು ಬಳಸಬೇಡಿ ಅಥವಾ ಮೈಮೇಲೆ ನೀರು ಸೋಕದಂತೆ ನೋಡಿಕೊಳ್ಳಿ.
ಗುಲ್‌ಮೊಹರ್ ಮರದ ಎಲೆಗಳನ್ನು ಒಣಗಿಸಿ. ನಂತರ ಅದನ್ನು ಪೌಡರ್ ಮಾಡಿಕೊಂಡು ಬಣ್ಣದ ಪುಡಿಯಾಗಿ ಬಳಸಿ.
ನೀರು
ಗ್ರೀನ್ ಟೀಯನ್ನು ನೀರಿನಲ್ಲಿ ಕುದಿಸಿ. ತಣ್ಣಗಾದ ಬಳಿಕ ಓಕುಳಿಯಾಟಕ್ಕೆ ಬಳಸಬಹುದು.
ಹಸಿರು ತರಕಾರಿಗಳಾದ ಬಸಳೆ, ಬಟಾಣಿ, ಪುದಿನ, ಬೇವನ್ನು ನೀರಿನಲ್ಲಿ ಬೇಯಿಸಿ ನಂತರ ಅದನ್ನು ಸ್ವಲ್ಪ ಹಿಟ್ಟಿನೊಂದಿಗೆ ಕಲಸಿ ಪೇಸ್ಟ್ ಆಗಿ ಪರಿವರ್ತಿಸಿ. ಈ ಪೇಸ್ಟ್ ಅನ್ನು ನೀರಿಗೆ ಹಾಕಿದರೆ ಹಸಿರು ಬಣ್ಣದ ಓಕುಳಿ ಸಿದ್ಧ.
ಪಾಲಕ್ ಸೊಪ್ಪನ್ನು ನೀರಿನೊಂದಿಗೆ ಕುದಿಸಿ. ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ.
ಕೇಸರಿ/ಆರೆಂಜ್
ನೀರು
ಕೇಸರಿ ಬಣ್ಣಕ್ಕಾಗಿ ನೀರಿಗೆ ಒಂದು ಟೀ ಸ್ಟೂನ್ ಶ್ರೀಗಂಧದ ಪುಡಿ ಹಾಕಿ.
ಸ್ವಲ್ಪ ಅರಸಿಣ ಪುಡಿ ಹಾಗೂ ಶ್ರೀಗಂಧದ ಪುಡಿಯನ್ನು ರೋಸ್‌ವಾಟರ್ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಕೇಸರಿ ಬಣ್ಣಕ್ಕೆ ತಿರುಗುತ್ತದೆ. ನಂತರ ಅದನ್ನು ನೀರಿನೊಂದಿಗೆ ಸೇರಿಸಿ. ಹೋಳಿಯಾಟಕ್ಕೆ ಕೇಸರಿ ಬಣ್ಣ ರೆಡಿ.
ಒಂದಷ್ಟು ಕ್ಯಾರೆಟ್ ಅನ್ನು ಬಿಸಿ ನೀರಲ್ಲಿ ಕುದಿಸಿ. ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ. ಆಗ ನೀರು ಆರೆಂಜ್ ಬಣ್ಣಕ್ಕೆ ತಿರುಗುತ್ತದೆ.
ಮೆಹಂದಿ ಪುಡಿಯನ್ನು ನೀರಿಗೆ ಸೇರಿಸಿದರೆ ಆರೆಂಜ್ ಬಣ್ಣ ಸಿದ್ಧ.
ಕಂದು ಬಣ್ಣ
ನೀರು
ಎರಡು, ಮೂರು ಟೀ ಸ್ಪೂನ್ ಕಾಫಿ ಪುಡಿಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಕುದಿಸಿ.
ಬಿಳಿ
ಒಣ ಬಣ್ಣ
ಗೋಧಿ ಇಟ್ಟು ಅಥವಾ ಅಕ್ಕಿ ಇಟ್ಟನ್ನು ಬಳಸಬಹುದು.
ನೀರು
ಹಾಲನ್ನು ನೀರಿನೊಂದಿಗೆ ಸೇರಿಸಿ ಬಳಸಿ.
ಕಂದು
ಸ್ವಲ್ಪ ಮೆಹಂದಿ ಪುಡಿ ಹಾಗೂ ನೆಲ್ಲಿಕಾಯಿಪುಡಿಯನ್ನು ನೀರಿಗೆ ಹಾಕಿ. ಗಾಢ ಕಂದು ಬಣ್ಣ ಸಿದ್ಧವಾಗುತ್ತದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.