ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

10 ನಕ್ಸಲರ ಹತ್ಯೆ

Parashurama
Updated On : 28 Mar 2013, 10:20 am

ರಾಂಚಿ: ಮಾವೋವಾದಿಗಳ ಎರಡು ಗುಂಪುಗಳ ನಡುವೆ ನಡೆದ ಕದನದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ನಕ್ಸಲೀಯರು ಸತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
  ತೃತೀಯ ಪ್ರಸ್ತುತಿ ಕಮಿಟಿ(ಟಿಪಿಸಿ) ಮತ್ತು ಸಿಪಿಐ ಮಾವೋವಾದಿಗಳ ನಡುವೆ ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆವರೆಗೆ ನಡೆದ ಗುಂಡಿನ ಹೋರಾಟದಲ್ಲಿ 10 ಮಂದಿ ಸತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
  ಈ ಪ್ರದೇಶದಲ್ಲಿ ಗುಂಡಿನ ಕಾಳಗ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬೆಳಗ್ಗೆ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟೊತ್ತಿಗಾಗಲೇ ಟಿಪಿಸಿ ಗ್ಯಾಂಗ್‌ನ ಸದಸ್ಯರು ಅಲ್ಲಿಂದ ಓಡಿ ಹೋಗಿದ್ದರು.
  ಆದರೆ ಸ್ಥಳದಲ್ಲಿ 10 ಮಾವೋವಾದಿ ನಾಯಕರ ಶವಗಳು ದೊರೆತಿವೆ ಎಂದು ಹೇಳಿದ್ದಾರೆ.
ಟಿಪಿಸಿ ಗುಂಪಿನ ಪ್ರಕಾರ 15ಕ್ಕೂ ಹೆಚ್ಚು ಮಾವೋವಾದಿಗಳ ಹತ್ಯೆಯಾಗಿದೆ. ನಮ್ಮ ಹೋರಾಟದಲ್ಲಿ 15 ಮಾವೋವಾದಿಗಳನ್ನು ಹತ್ಯೆ ಮಾಡಿದ್ದೇವೆ ಎಂದು ಟಿಪಿಸಿ ನಾಯಕ ಹೇಳಿದ್ದಾನೆ.
  ಅಲ್ಲದೆ 10 ಮಂದಿ ಮಾವೋವಾದಿಗಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಅದರ ನಾಯಕ ಅಜಯ್‌ಜಿ ಹೇಳಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments