ದೇಶ

ಜನಪ್ರಿಯ ಉದ್ಯೋಗದಾತರು

ಪ್ರತಿವರ್ಷ ಲಕ್ಷಾಂತರ ಎಂಜಿನಿಯರ್‌ಗಳು ಕಾಲೇಜುಗಳಿಂದ ಹೊರ ಬರುತ್ತಾರೆ. ತಮ್ಮ ಇಷ್ಟದ ಕಂಪನಿಗಳಲ್ಲಿ ಕೆಲಸ ಸಿಗಲಿ ಎಂದು ಕನಸು ಕಾಣುತ್ತಾರೆ. ಈ ರೀತಿ ವಿದ್ಯಾರ್ಥಿಗಳ ಪಾಲಿಗೆ ಇಷ್ಟವಾಗಿರುವ, ಅವರು ಕೆಲಸ ಮಾಡ ಬಯಸುವ 10 ಪ್ರಮುಖ ಕಂಪನಿಗಳ ಪಟ್ಟಿ ಇಲ್ಲಿ ಕೊಡಲಾಗಿದೆ.

ಗೂಗಲ್
ಗೂಗಲ್ ಇಂಕ್ ಮಾಲೀಕತ್ವದ ವೆಬ್ ಸರ್ಚ್ ಎಂಜಿನ್ ಕಂಪನಿ. ವರ್ಲ್ಡ್ ವೈಡ್ ವೆಬ್‌ನಲ್ಲಿ ಗೂಗಲ್ ಅತೀ ಹೆಚ್ಚು ಬಳಕೆಯಾಗುವ ಸರ್ಚ್ ಎಂಜಿನ್ ಆಗಿದೆ.  2013ರ ನೀಲ್ಸನ್ ಸರ್ವೆ ಪ್ರಕಾರ ಭಾರತೀಯ ಪದವೀಧರರ ಕನಸಿನ ಉದ್ಯೋಗದಾತ ಈ ಗೂಗಲ್.
ಮೈಕ್ರೋಸಾಫ್ಟ್
ಆದಾಯದ ದೃಷ್ಟಿಯಲ್ಲಿ ವಿಶ್ವದ ಅತಿ ದೊಡ್ಡ ಸಾಫ್ಟ್‌ವೇರ್ ನಿರ್ಮಾಣ ಸಂಸ್ಥೆ. ಮೈಕ್ರೋಸಾಫ್ಟ್ ಕಾರ್ಪೋರೆಷನ್ ಅಮೆರಿಕದ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಯಾಗಿದೆ.
ಇನ್ಫೋಸಿಸ್
ಭಾರತದ ಬಹುರಾಷ್ಟ್ರೀಯ ಬ್ಯುಸಿನೆಸ್ ಕನ್ಸಲ್ಟಿಂಗ್, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಔಟ್‌ಸೋರ್ಸಿಂಗ್ ಸೇವೆಗಳ ಕಂಪನಿ. 2012ರ ಸಾಲಿನಲ್ಲಿ ಆದಾಯದ ದೃಷ್ಟಿಯಿಂದ ಭಾರತದ ಮೂರನೇ ಅತಿ ದೊಡ್ಡ ಐಟಿ ಸೇವೆಗಳ ಕಂಪನಿಯಾಗಿದೆ. ಸಂಸ್ಥೆಯಲ್ಲಿ 1.55 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ಭಾರತದ ಬಹುರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಸೇವೆ, ಬ್ಯುಸಿನೆಸ್ ಸೊಲ್ಯೂಷನ್ಸ್ ಮತ್ತು ಔಟ್‌ಸೋರ್ಸಿಂಗ್ ಸೇವೆಗಳ ಕಂಪನಿ. ಕೇಂದ್ರ ಕಚೇರಿ ಮುಂಬೈನಲ್ಲಿದೆ. ಇದು ಟಾಟಾ ಕಂಪನಿಯ ಸಹಸಂಸ್ಥೆಯಾಗಿದೆ. ಟಿಸಿಎಸ್‌ನಲ್ಲಿ ಕಂಪನಿಯಲ್ಲಿ 2.63 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ.
ಐಬಿಎಂ
ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಮಷಿನ್ಸ್ ಕಾರ್ಪೊರೇಷನ್(ಐಬಿಎಂ) ಅಮೆರಿಕದ ಬಹುರಾಷ್ಟ್ರೀಯ ತಾಂತ್ರಿಕ ಮತ್ತು ಕನ್ಸಲ್ಟಿಂಗ್ ಕಾರ್ಪೊರೇಷನ್ ಆಗಿದೆ. ಇದು ವಿಶ್ವದ ಅತಿ ದೊಡ್ಡ ಕಂಪ್ಯೂಟರ್ ಕಂಪನಿ.
ಫೇಸ್‌ಬುಕ್
ಸಾಮಾಜಿಕ ಜಾಲ ತಾಣ ಕಂಪನಿ. ಫೇಸ್‌ಬುಕ್ ಒಂದು ಶತಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ.
ಬಿಎಚ್‌ಇಎಲ್
ಬಿಎಚ್‌ಇಎಲ್ ಮೂಲ ಸೌಲಭ್ಯ ಹಾಗೂ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಭಾರತದ ಅತಿ ದೊಡ್ಡ ಎಂಜಿನಿಯರಿಂಗ್ ಮತ್ತು ನಿರ್ಮಾಣ ಕಂಪನಿಯಾಗಿದೆ. ಈ ಕಂಪನಿಯಲ್ಲಿ 50 ಸಾವಿಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಎಲ್ ಆ್ಯಂಡ್
ಲಾರ್ಸನ್ ಆ್ಯಂಡ್ ಟ್ಯೂಬ್ರೋ ಲಿಮಿಟೆಡ್(ಎಲ್ ಆ್ಯಂಡ್ ಟಿ) ತಾಂತ್ರಿಕ, ಎಂಜಿನಿಯರಿಂಗ್, ನಿರ್ಮಾಣ ಮತ್ತು ಉತ್ಪಾದನಾ ಕಂಪನಿ. ಇದರ ಕೇಂದ್ರ ಕಚೇರಿ ಮುಂಬೈನಲ್ಲಿದೆ. ಕಂಪನಿಯಲ್ಲಿ 46 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ವಿಪ್ರೋ
ಮಾಹಿತಿ ತಂತ್ರಜ್ಞಾನ, ಕನ್ಸಲ್ಟಿಂಗ್ ಮತ್ತು ಔಟ್‌ಸೋರ್ಸಿಂಗ್ ಸೇವೆಗಳ ಕಂಪನಿ. ಸಂಸ್ಥೆಯಲ್ಲಿ 1.40 ಸಾವಿರ ಸಿಬ್ಬಂದಿ ಇದ್ದಾರೆ.
ಎನ್‌ಟಿಪಿಸಿ
ದೇಶದ ಅತಿ ದೊಡ್ಡ ಎಲೆಕ್ಟ್ರಿಕ್ ಯುಟಿಲಿಟಿ ಕಂಪನಿ. ಎಂಜಿನಿಯರಿಂಗ್, ನಿರ್ಮಾಣ, ಇಂಧನ ಉತ್ಪಾದನಾ ಪ್ಲಾಂಟ್‌ಗಳು ಮತ್ತು ವಿದ್ಯುತ್ ಬಳಕೆಗೆ ಸಂಬಂಧಿಸಿ ಕನ್ಸಲ್ಟೆನ್ಸಿ ಸೇವೆ ಒದಗಿಸುತ್ತದೆ. ಸಂಸ್ಥೆಯಲ್ಲಿ 26 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್