ನವದೆಹಲಿ: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಏ.1ರಿಂದ ನಡೆಸಲುದ್ದೇಶಿಸಿದ್ದ ಸದ್ಯಕ್ಕೆ ಮುಷ್ಕರವನ್ನು ಕೈಬಿಟ್ಟಿರುವುದಾಗಿ ಲಾರಿ ಮಾಲೀಕರ ಸಂಘ ತಿಳಿಸಿದೆ. ತಮ್ಮ ಬೇಡಿಕೆಯನ್ನು ಕಾಲಮಿತಿಯೊಳಗೆ ಪರಿಹರಿಸುವ ಭರವಸೆಯನ್ನು ಕೇಂದ್ರವು ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಆಲ್ ಇಂಡಿಯಾ ಮೋಟಾರಾ ಕಾಂಗ್ರೆಸ್‌ನ ಅಧ್ಯಕ್ಷ ಬಾಲ್ ಮಲ್ಕಿತ್ ತಿಳಿಸಿದ್ದಾರೆ.