ನವದೆಹಲಿ: ಸೈಬರ್ ದಾಳಿಯಿಂದ ಭಾರತದ ಮೇಲೆ ಭಾರಿ ಪ್ರಮಾಣದ ಅಡ್ಡ ಪರಿಣಾಮವಿಲ್ಲ ಎಂದು ಕೇಂದ್ರದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
ಜಾಗತಿಕವಾಗಿ ಸಮಸ್ಯೆ ಕಾಡಿರಬಹುದು. ಆದರೆ ಭಾರತದ ಮಟ್ಟಿಗೆ ಹೇಳುವುದಾದರೆ ನಾವು ಒಂದಷ್ಟು ಸುರಕ್ಷತಾ ಮಟ್ಟದಲ್ಲಿದ್ದೇವೆ. ಉತ್ತರ ಭಾರತವಂತೂ ಸೈಬರ್ ದಾಳಿಯಿಂದ ಸ್ವಲ್ಪ ಮಟ್ಟಿಗೆ ತಪ್ಪಿಸಿಕೊಂಡಿದೆ. ಆದರೆ ದಕ್ಷಿಣ ಭಾರತದಲ್ಲಿ ಒಂದಷ್ಟು ಹೊಡೆತ ಬಿದ್ದಿದೆ ಎಂದು ಒಪ್ಪಿಕೊಂಡಿದ್ದಾರೆ.
ಅದರಲ್ಲೂ ದಕ್ಷಿಣ ಭಾರತದಲ್ಲಿ ಬಿಎಸ್ಎನ್ಎಲ್ ನೀಡುತ್ತಿರುವ ಸೇವೆ ಮೇಲೆ ಹೊಡೆತ ಬಿದ್ದಿದೆ. ಆದರೆ ಖಾಸಗಿ ಸಂಸ್ಥೆಗಳು ನೀಡುತ್ತಿರುವ ಅಂತಾರ್ಜಾಲ ವ್ಯವಸ್ಥೆಗೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಸರ್ಕಾರ ಯಾವುದೇ ಗ್ರಾಹಕರಿಗೆ ಯಾವುದೇ ರೀತಿಯ ಎಚ್ಚರಿಕೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.