ನವದೆಹಲಿ/ ಬೆಂಗಳೂರು: ಮದ್ಯದ ದೊರೆ ವಿಜಯ್ ಮಲ್ಯ ಮತ್ತೊಂದು ಹಿನ್ನಡೆ ಅನುಭವಿಸಿದ್ದಾರೆ. ಸಾಲದ ಸುಳಿಯಲ್ಲಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಆಗುವ ಪ್ರಯತ್ನಕ್ಕೆ ಸರ್ಕಾರ ಅಡ್ಡಗಾಲು ಹಾಕಿದೆ. ಅಕ್ಟೋಬರ್, 2012ರಿಂದ ಹಾರಾಟ ನಿಲ್ಲಿಸಿರುವ ಕಿಂಗ್‌ಫಿಶರ್ ಏರ್‌ಲೈನ್ಸ್ ಭಾರಿ ಮೊತ್ತದ ಸಾಲದ ಸಾಲದ ಸುಳಿಯಲ್ಲಿ ಸಿಲುಕಿದೆ. ಮಲ್ಯ ಅವರನ್ನು ಅ.16, 2013ರಿಂದ ಅನ್ವಯವಾಗುವಂತೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮರು ನೇಮಿಸಲು ಅವಕಾಶ ಮಾಡಿಕೊಡಬೇಕು ಎಂದು ಕಿಂಗ್‌ಫಿಶರ್ ಏರ್‌ಲೈನ್ಸ್ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿತ್ತು. ಆದರೆ ಯಾವುದೇ ಕಾರಣ ನೀಡದೆ ಈ ಸಚಿವಾಲಯ ಈ ಅರ್ಜಿಯನ್ನು ರದ್ದು ಮಾಡಿದೆ..
ರಾಜಿನಾಮೆ ನೀಡಿದ್ರು, ಷೇರು ಮೌಲ್ಯ ಹೆಚ್ಚಾಯ್ತು: ಮದ್ಯದ ದೊರೆ ವಿಜಯ ಮಲ್ಯ ಅವರು ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ (ಎಂಸಿಎಫ್) ನ ನಿರ್ದೇಶಕ ಮಂಡಳಿಗೂ ಯಾವುದೇ ಕಾರಣ ನೀಡದೆ ರಾಜಿನಾಮೆ ನೀಡಿದ್ದಾರೆ. ಮಲ್ಯ ಅವರು ಹುದ್ದೆಯಿಂದ ಕೆಳಗಿಳಿದಿದ್ದೇ ತಡ ಕಂಪನಿಯ ಷೇರುಗಳು ಅಚ್ಚರಿ ರೀತಿಯಲ್ಲಿ ಏರಿಕೆ ಕಂಡಿದೆ. ಮಲ್ಯ ಅವರು ನಿರ್ದೇಶಕ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂದು ಸೋಮವಾರ ಬೆಳಗ್ಗೆ ಷೇರು ವಿನಿಮಯ ಕೇಂದ್ರಕ್ಕೆ ಕಂಪನಿ ಮಾಹಿತಿ ನೀಡಿದೊಡನೆ ಹೂಡಿಕಿದಾರರು ಷೇರುಗಳ ಭಾರಿ ಖರೀದಿಯಲ್ಲಿ ತೊಡಗಿದರು . ಪರಿಣಾಮ ವಹಿವಾಟಿನ ಆರಂಭವಾದ ಸ್ವಲ್ಪ ಹೊತ್ತಲ್ಲೇ ಎಂಸಿಎಫ್ ಷೇರುಗಳು ಶೇ.15 ರಷ್ಟು ಏರಿಕೆ ಕಂಡವು.