ನವದೆಹಲಿ: 'ಕಿಸಾನ್ ವಿಕಾಸ ಪತ್ರ'ದ ಮಾದರಿಯಲ್ಲೇ ಸಾರ್ವಜನಿಕರಿಗೆ ಮತ್ತೊಂದು ಉಳಿತಾಯ ಯೋಜನೆಯನ್ನು ಕೇಂದ್ರ ಸರ್ಕಾರ ಚಾಲನೆಗೊಳಿಸಿದೆ. ಈ ಯೋಜನೆಯ ಹೆಸರು ಸುಕನ್ಯ ಸಮೃದ್ಧಿ ಯೋಜನೆ. ಹೆಣ್ಣುಮಕ್ಕಳ ಆರ್ಥಿಕ ಸ್ವಾವಲಂಬನೆಗೂ ಈ ಯೋಜನೆಯಲ್ಲಿ ಒತ್ತು ನೀಡಲಾಗಿದೆ.
ಪ್ರತಿ ಬ್ಯಾಂಕ್, ಅಂಚೆ ಕಚೇರಿಯಲ್ಲಿ ಯೋಜನೆಯಡಿ ಖಾತೆ ತೆರೆಯಬಹುದು.
10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ, ಮಗುವಿನ ಹೆಸರಲ್ಲೂ ಖಾತೆ ತೆರೆಯಲು ಅವಕಾಶ.
ಮಗುವಿಗೆ 10 ವರ್ಷ ವಯಸ್ಸಾದ ಮೇಲೆ ತನ್ನ ಖಾತೆಯನ್ನು ಆಕೆ ಸ್ವತಂತ್ರವಾಗಿ ನಿರ್ವಹಿಸಬಹುದು.
ಬಾಲಕಿಗೆ 14 ವರ್ಷ ವಯಸ್ಸಾಗುವವರೆಗೂ ಖಾತೆಗೆ ಹಣ ತುಂಬಲು ಅವಕಾಶ.
18 ವರ್ಷ ವಯಸ್ಸಾದಾಗ ತನ್ನ ಉನ್ನತ ವಿದ್ಯಾಭ್ಯಾಸ ಅಥವಾ ಮದುವೆಗಾಗಿ ಹಣ(ಬಡ್ಡಿ ಸಹಿತ) ಪಡೆಯಬಹುದು.
ನಿರ್ಬಧನೆಗಳು
ಕನಿಷ್ಠ ಠೇವಣಿ ರು. 1 ಸಾವಿರದಿಂದ ಖಾತೆ ಆರಂಭಿಸಬೇಕು.
ಪ್ರತಿ ವರ್ಷ ಕನಿಷ್ಠ ರು. 1 ಸಾವಿರ ಜಮೆ ಮಾಡಲೇಬೇಕು.