ದೇಶ

ಭಾರತದ ಖಾರ ತಿನ್ನೋ ಅದೃಷ್ಟ ಒಬಾಮಗಿಲ್ಲ!

Rashmi Kasaragodu

ವಾಷಿಂಗ್ಟನ್: ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಒಬಾಮಗೆ ಗುಜರಾತ್‌ನ ಧೋಕ್ಲಾ ಹಾಗೂ ಪಾತ್ರದ ರುಚಿ ತೋರಿಸಬೇಕು ಎಂಬ ಪ್ರಧಾನಿ ಆಸೆಗೆ ತಣ್ಣೀರು ಬಿದ್ದಿದೆ.

ಇದಕ್ಕೆ ಕಾರಣ ಒಬಾಮರನ್ನು ಕಾಡುತ್ತಿರುವ ಹೊಟ್ಟೆ ಉರಿ ಸಮಸ್ಯೆ. ಗಂಟಲು ನೋವು ಹಾಗೂ ಹೊಟ್ಟೆ ಉರಿಯಿಂದ ಬಳಲುತ್ತಿರುವ ಒಬಾಮ  ಅವರು ಯಾವ ಕಾರಣಕ್ಕೂ ಖಾರ ತಿನಿಸು ತಿನ್ನುವುದಿಲ್ಲವಂತೆ. ಹಾಗಾಗಿ ಭಾರತದ ಸ್ಪೈಸಿ ತಿನಿಸಿನ ರುಚಿ ನೋಡುವ ಅದೃಷ್ಟವನ್ನು ಒಬಾಮ ಕಳೆದುಕೊಂಡಿದ್ದಾರೆ. ದೆಹಲಿ ಭೇಟಿ  ವೇಳೆ ಧೋಕ್ಲಾ, ಥೇಪ್ಲಾ, ಪಾಪಡ್ ಮತ್ತಿತರ ತಿನಿಸುಗಳು ಒಬಾಮ ಮೆನುವಿನಿಂದ ದೂರ ಉಳಿಯಲಿದೆ. ಶನಿವಾರವಷ್ಟೇ ಅವರು ಅಮೆರಿಕದ ಸೇನಾ ಆಸ್ಪತ್ರೆಗೆ ತೆರಳಿ ಎದೆಯುರಿ ಹಾಗೂ ಹೊಟ್ಟೆ ಉರಿಗೆ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು. ಭಾರತದ ಭೇಟಿ ವೇಳೆ ಒಬಾಮರಿಗೆ ಆಹಾರ ಒದಗಿಸಲು ಅಮೆರಿಕದ ಬಾಣಸಿಗರೇ ಆಗಮಿಸಲಿದ್ದಾರೆ ಎಂದು ಭಾನುವಾರ ಘೋಷಿಸಲಾಗಿತ್ತು.

SCROLL FOR NEXT