ದೇಶ

ಯೋಗ ದಿನ ಜೂ. 21ಕ್ಕೆ?

Rashmi Kasaragodu

ನವದೆಹಲಿ:  ಅಂತಾರಾಷ್ಟ್ರೀಯ ಯೋಗ ದಿನ ಘೋಷಣೆಯ ಪ್ರಧಾನಿ ಮೋದಿ ಸಲಹೆಗೆ ವಿಶ್ವಸಂಸ್ಥೆ ಒಪ್ಪಿದ್ದು ಜೂ.21ನ್ನು 'ವಿಶ್ವಯೋಗ ದಿನ'ವಾಗಿ ಶೀಘ್ರವೇ ಘೋಷಿಸಲಿದೆ. ಸೆಪ್ಟೆಂಬರ್‌ನಲ್ಲಿ ವಿಶ್ವ ಸಂಸ್ಥೆಯಲ್ಲಿ ಭಾಷಣ ಮಾಡಿದ ವೇಳೆ ಈ ಸಂಬಂಧ ಮೋದಿ ಸಲಹೆ ನೀಡಿದ್ದರು. ಅದಕ್ಕೆ ಎಲ್ಲ 170 ಸದಸ್ಯ ರಾಷ್ಟ್ರಗಳ ಬೆಂಬಲ ಸಿಕ್ಕಿತ್ತು. ಜತೆಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಸಹ ಒಪ್ಪಿಕೊಂಡಿದ್ದರು. ಪೂರಕವಾಗಿ ಐರೋಪ್ಯ  ಒಕ್ಕೂಟ ಅಧ್ಯಕ್ಷ ವ್ಯಾನ್ ರೊಂಪಿ ಕೂಡಾ ಪ್ರಧಾನಿ ಸಲಹೆಗೆ ಬೆಂಬಲ ವ್ಯಕ್ತಪಡಿಸಿದ್ದರು.

SCROLL FOR NEXT