ಸುಖೋಯಿ ವಿಮಾನ 
ದೇಶ

'ಸುಖೋಯಿ' ವಿಮಾನ ದುರಸ್ತಿ, ನಿರ್ವಹಣೆಗೆ ರು. 2,263 ಕೋಟಿ ಖರ್ಚು!

ನವದೆಹಲಿ: ಭಾರತೀಯ ವಾಯು ಪಡೆ(ಐಎಎಫ್)ಯ ಸುಖೋಯಿ ವಿಮಾನದ ದುರಸ್ತಿ ಹಾಗೂ ನಿರ್ವಹಣೆಗೆ ಸರ್ಕಾರ ಬರೋಬ್ಬರಿ 2,263 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಮಂಗಳವಾರ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಭಾರತೀಯ ವಾಯು ಪಡೆಯ ಅತ್ಯಂತ ದೊಡ್ಡ ವಿಮಾನ ಸುಖೋಯಿನ ದುರಸ್ತಿ ಹಾಗೂ ನಿರ್ವಹಣೆಗಾಗಿ 2,263 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ ಎಂದು ಪಾರಿಕ್ಕರ್ ರಾಜ್ಯಸಭೆಗೆ ಲಿಖಿತ ಹೇಳಿಕೆಯನ್ನು ನೀಡಿದ್ದಾರೆ.

2011-12 ಸಾಲಿನಲ್ಲಿ ಸುಮಾರು 551.35 ಕೋಟಿ ರುಪಾಯಿ, 2012-13ರಲ್ಲಿ ಬರೋಬ್ಬರಿ ರು. 877.84 ಕೋಟಿ ವೆಚ್ಚ ಮಾಡಲಾಗಿದ್ದು, ಪ್ರಸಕ್ತ ವರ್ಷ 834.76 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸುಖೋಯಿ ವಿಮಾನ ಇತ್ತೀಚೆಗಷ್ಟೇ ಪುಣೆ ಬಳಿ ಅಪ್ಪಳಿಸಿತ್ತು ಎಸ್‌ಯು-30 ವಿಮಾನದ ದುರಸ್ಥಿ ಹಾಗೂ ನಿರ್ವಹಣೆಯನ್ನು ಮೂಲ ಸಾಮಗ್ರಿ ತಯಾರಿಕ(ಓಇಎಂ) ಸಂಸ್ಥೆ ನಿರ್ವಹಿಸುತ್ತಿತ್ತು.

ಸುಖೋಯಿ ದುರಂತ ಕಾರಣ ಖಚಿತಪಡಿಸಿಕೊಳ್ಳಲು ಸ್ಥಳೀಯ ನ್ಯಾಯಾಲಯವೊಂದು ತನಿಖೆಗೆ ಆದೇಶಿಸಿತ್ತು ಎಂದು ಪಾರಿಕ್ಕರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ!

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ಕೈಗಾರಿಕಾ ಅಭಿವೃದ್ಧಿಗೆ 5 ನಗರಗಳನ್ನು ಗುರುತಿಸಲು ಅಧಿಕಾರಿಗಳಿಗೆ CM DK Shivakumar ನಿರ್ದೇಶನ

ವಾಲ್ಮೀಕಿ ಹಗರಣದ 'ಕಿಂಗ್ ಪಿನ್' ನಾಗೇಂದ್ರ ಔಟ್: ಜನಾಕ್ರೋಶದ ಮುಂದೆ ಮಂಡಿಯೂರಿ ಶರಣಾದ ಭ್ರಷ್ಟ ಕಾಂಗ್ರೆಸ್ ಸರ್ಕಾರ! ಬಿಜೆಪಿ

ನೇಪಾಳದಲ್ಲಿ ದಿಢೀರ್ ಪ್ರವಾಹ: ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆ; 320 ಭಾರತೀಯ ಪ್ರವಾಸಿಗರು ನಾಪತ್ತೆ!