ನಮ್ಮ ಬೆಂಗಳೂರು 
ದೇಶ

ನಮ್ಮ ಬೆಂಗಳೂರು ಪುರಸ್ಕಾರ: ಆಯ್ಕೆ ಶುರು

ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡಲಿರುವ ನಮ್ಮ ಬೆಂಗಳೂರು ಪುರಸ್ಕಾರ...

ಬೆಂಗಳೂರು: ನಮ್ಮ ಬೆಂಗಳೂರು ಪ್ರತಿಷ್ಠಾನ ನೀಡಲಿರುವ ನಮ್ಮ ಬೆಂಗಳೂರು ಪುರಸ್ಕಾರಕ್ಕೆ ಸಕ್ರಿಯ ನಾಗರಿಕರನ್ನು ಆಯ್ಕೆ ಮಾಡಲು ವಿದ್ಯಾರ್ಥಿಗಳು ತೆರಳಲಿದ್ದಾರೆ.

ಪೀಣ್ಯದ ಡಾ.ರಾಜ್‌ಕುಮಾರ್ ಮೈದಾನದಲ್ಲಿ ಪ್ರಕ್ರಿಯೆ ಆರಂಭವಾಗಲಿದ್ದು ಚಲನಚಿತ್ರ ನಿರ್ಮಾಪಕ ಎಂ.ಜಿ.ಶ್ರೀನಿವಾಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಸಾಮಾನ್ಯ ನಾಗರಿಕರು ಹಾಗೂ ಅವರ ಸೇವೆಯನ್ನು ಗುರುತಿಸಿ ಪುರಸ್ಕಾರ ನೀಡಲಾಗುತ್ತದೆ. ಜನರ ಮಧ್ಯೆಯೇ ಇದ್ದು ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರು, ಸಾಮಾನ್ಯರಾಗಿದ್ದು ಹೊಸದೊಂದ ಬದಲಾವಣೆಯನ್ನು ತಂದಿರುವಂಥವರನ್ನು ಈ ಪುರಸ್ಕಾರಕ್ಕೆ ಗುರುತಿಸಲಾಗುತ್ತದೆ. ವಿದ್ಯಾರ್ಥಿಗಲು ಇಡಿ ಬೆಂಗಳೂರನ್ನು ಸುತ್ತಾಡಿ, ಹುಡುಕಾಟ ನಡೆಸಿ ಅವರ ನೆಚ್ಚನ ಹೀರೋವನ್ನು ಆಯ್ಕೆ ಮಾಡುತ್ತಾರೆ.

ನಾಗರಿಕರೇ ಅವರೊಳಗಿರುವ ಉತ್ತಮರನ್ನು ಗುರುತಿಸುವುದರಿಂದ ಈ ಪುರಸ್ಕಾರ ಇತರೆ ಪುರಸ್ಕಾರಗಳಿಗಿಂದ ವಿಭಿನ್ನ ಎನಿಸುತ್ತದೆ.

ಉಳಿದವರಿಗಿಂತ ತಾವು ಹೇಗೆ ಭಿನ್ನ ಎಂಬುದನ್ನೂ ಸ್ಪಷ್ಟಪಡಿಸುವ ಅವಕಾಶ ನೀಡಲಾಗುತ್ತದೆ. ಪ್ರಶಸ್ತಿ 1 ಲಕ್ಷ ನಗದನ್ನು ಒಳಗೊಂಡಿರುತ್ತದೆ. ಪ್ರಕ್ರಿಯೆ ಡಿ.10 ರಂದು ಆರಂಭವಾಗಲಿದ್ದು ಡಿ.11 ಕ್ಕೆ ಜಯನಗರ, ಜೆಪಿ ನಗರ, ಬಿಟಿಎಂ, ಬನ್ನೇರುಘಟ್ಟ, ಡಿ.12ರಂದು ವೈಟ್ ಫೀಲ್ಡ್, ಮಾರತ್ತಹಳ್ಳಿ, ಸರ್ಜಾಪುರ, ಡಿ.13ಕ್ಕೆ ಸದಾಶಿವ ನಗರ, ಮಲ್ಲೇಶ್ವರ, ಶೇಷಾದ್ರಿಪುರ, ಗಾಂಧಿನಗರ, ಡಿ.14-ಮೈಸೂರು ರಸ್ತೆ, ವಿಜಯನಗರ, ರಾಜಾಜಿನಗರ, ಡಿ. 15 ಗಾಂಧಿ ಬಜಾರ್, ಹನುಮಂತನಗರ, ಗಿರಿನಗರ, ಡಿ.16ಕ್ಕೆ ಕೆಆರ್‌ಪುರ, ರಾಮಮೂರ್ತಿನಗರ, ಕಮ್ಮನಹಳ್ಳಿಗಳಿಗೆ ತೆರಳಿ ಹೀರೋಗಳನ್ನು ಆಯ್ಕೆ ಮಾಡಲಾಗುತ್ತದೆ.

ವಿವರಗಳಿಗೆ:
ಮೊ: 9591985287, 9036288857.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT