ರಾಂಪಾಲ್, ಬಬಿತಾ 
ದೇಶ

ಬಾಬಾ ರಾಂಪಾಲ್ 'ಕಾಮ' ರಹಸ್ಯ ಬಯಲು!

ಚಂಡೀಗಢ: ವಿವಾಧಿತ ಸ್ವಯಂಘೋಷಿತ ದೇವಮಾನವ ಬಾಬಾ ರಾಂಪಾಲ್ ವಿರುದ್ಧ ಪೊಲೀಸರು ಮಾಹಿತಿ ಕಲೆ ಹಾಕುವ ವೇಳೆ, ಬೆಡ್‌ರೂಮ್‌ನಲ್ಲಿ ಬಾಬಾ ರಾಸಲೀಲೆಗಳ ಬಗ್ಗೆ ತಿಳಿದು ಪೊಲೀಸರು ಬೆಚ್ಚಿಬಿದ್ದಿದ್ದಾರೆ.

ಹಣದ ಮೂಲ, ಪ್ರತಿಷ್ಠಿತರ ನಂಟು ಸೇರಿದಂತೆ ಹಲವು ವಿಷಯಗಳಲ್ಲಿ ಬಾಬಾ ರಹಸ್ಯ ಪೊಲೀಸರಿಗೆ ತಿಳಿದಿದ್ದು, ಇದೀಗ ಬಾಬಾ ಪರಮಾಪ್ತಳಾದ 27 ವರ್ಷದ ಯುವತಿ ಬಬಿತಾ ಕುಮಾರಿ ಅಲಿಯಾಸ್ ಬೇಬಿ ಹಲವು ರಾಸಲೀಲೆ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ.

ಬಾಬಾ ರಾಂಪಾಲ್‌ನ ಬೆಡ್ ರೂಂ ಪ್ರವೇಶಕ್ಕೆ ಅವಕಾಶವಿರುವ ಕೆಲವೇ ಮಹಿಳೆಯಲ್ಲಿ ಬಬಿತಾ ಕುಮಾರಿಯು ಒಬ್ಬಳಾಗಿದ್ದು, ಬಬಿತಾ ಬಾಬಾ ರಾಂಪಾಲ್‌ರ ಹಿಂಬಾಲಕ ಬಲಜೀತ್ ಮಗಳು. ಬಬಿತಾ ಯಾವುದೇ ಕ್ಷಣದಲ್ಲಾದರೂ ಬಾಬಾ ಕೋಣೆಯನ್ನು ಪ್ರವೇಶಿಸುವ ಅವಕಾಶ ಪಡೆದಿದ್ದಳು. ಹೀಗಾಗಿ ಈ ಇಬ್ಬರೂ ಕೋಣೆಯೊಳೆಗೆ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದರು. ಈ ಇಬ್ಬರು ಒಟ್ಟಿಗೆ ಇದ್ದಾಗ ಬೇರ್ಯಾರು ಕೋಣೆ ಪ್ರವೇಶಿಸುವಂತಿರಲಿಲ್ಲ.

ಬಾಬಾ ರಾಂಪಾಲ್ ಬಂಧನದ ನಂತರ ಆಶ್ರಮದಲ್ಲಿ ನೆಲೆಸಿದ್ದ ಬಬಿತಾ ಕುಮಾರಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಬಬಿತಾ ರಾಂಪಾಲ್‌ರ ಹಲವು ರಹಸ್ಯ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ.

ಬಾಬಾ ರಾಂಪಾಲ್ ಹಾಗೂ ಆತನ ಪುತ್ರನ ಜೊತೆಗಿದ್ದ ಆಪ್ತತೆಯಿಂದಾಗಿ ಬಬಿತಾ ಕುಮಾರಿಗೆ ಬಾಬಾರವರ ಎಲ್ಲಾ ವ್ಯವಹಾರಗಳು, ರಹಸ್ಯಗಳು ಚೆನ್ನಾಗಿ ಗೊತ್ತಿದೆ. ಪೊಲೀಸರು ಆಶ್ರಮದ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಈಕೆ ಕಂಪ್ಯೂಟರಿನಿಂದ ಹಾರ್ಡ್‌ಡಿಸ್ಕ್‌ಗಳನ್ನು ತೆಗೆದು ನಾಶಪಡಿಸಲು ಯತ್ನಿಸಿದ್ದಳು. ಅಲ್ಲದೇ ಇವರಿಬ್ಬರು ಇರುತ್ತಿದ್ದ ಕೊಠಡಿಯಲ್ಲಿ ಪೊಲೀಸರಿಗೆ ಲೈಂಗಕ ಉತ್ತೇಜಕ ಔಷಧ ಮೊದಲಾದ ವಸ್ತುಗಳು ಸಿಕ್ಕಿದ್ದವು.

ಬಲ್‌ಜೀತ್ ಮತ್ತು ಬಬಿತಾಳಿಂದ ಲಾಪ್‌ಟಾಪ್, ಆರು ಮೊಬೈಲ್, ಹತ್ತು ಹಾರ್ಡ್‌ಡಿಸ್ಕ್, 17 ಸಿಡಿ, ಮೂರು ಟೆಲಿಫೋನ್ ಡೈವರ್ಸ್ ಮತ್ತು ಐದು ಫೈಲ್‌ಗಳನ್ನು ವಶಕ್ಕೆ ಪಡೆದಿದ್ದು, ಸೈಬರ್ ತ್ರಜ್ಞರು ಸೇರಿದಂತೆ ವಿಶೇಷ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ಹರಿಯಾಣ ಡಿಜಿಪಿ ಎಸ್.ಎನ್ ವಶಿಷ್ಠ ಅವರು ಮಾಹಿತಿ ನೀಡಿದ್ದಾರೆ.

ಸಂಪೂರ್ಣ ವಿಚಾರಣೆ ನಡೆಸಿದ ಬಳಿಕ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ತಮಿಳುನಾಡು-ಆಂಧ್ರ ತೀರಕ್ಕೆ ದಿತ್ವಾ ಚಂಡಮಾರುತ: ಬೆಂಗಳೂರು ಸೇರಿ ಕರ್ನಾಟಕದಲ್ಲಿ 4 ದಿನ ಭಾರೀ ಮಳೆ ಸಾಧ್ಯತೆ; IMD ಎಚ್ಚರಿಕೆ

ಗಲ್ಲು ಶಿಕ್ಷೆ ಬೆನ್ನಲ್ಲೇ ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 21 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ರಾಜಕೀಯ ಅಂದ್ರೆ ಅದು.... ಸಿಎಂ ಕುರ್ಚಿ ಗುದ್ದಾಟದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಸಂಸದೆ ರಮ್ಯಾ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

SCROLL FOR NEXT