ದೇಶ

ಮಡೆ ಮಡೆ ಸ್ನಾನಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ

Mainashree

ನವದೆಹಲಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆ ಮಡೆ ಸ್ನಾನ ಆಚರಣೆಗೆ ಅನುಮತಿ ನೀಡಿರುವ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆವೊಡ್ಡಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ  ಹಿಂದಿನಿಂದ ನಡೆದು ಬಂದಿದ್ದ ಮಡೆ ಸ್ನಾನ ಪದ್ಧತಿಯನ್ನು ಮುಂದುವರೆಸಲು ಹೈಕೋರ್ಟ್ ನವೆಂಬರ್ 19ರಂದು ಆದೇಶ ಅನುಮತಿ ನೀಡಿತ್ತು.

ಪ್ರತಿವಾದಿಗಳು ಪರ ವಕೀಲ 500 ವರ್ಷಗಳಿಂದ ಅಸ್ಪೃಶ್ಯತೆ ಪದ್ಧತಿ ಆಚರಣೆಯಲ್ಲಿದೆ ಎಂದು ವಾದ ಮಂಡಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, 500ಗಳಿಂದ ಅಸ್ಪೃಶ್ಯತೆ ಆಚರಣೆಯಲ್ಲಿದೆ ಎಂಬ ಕಾರಣಕ್ಕೆ ಆಚರಣೆ ಮುಂದುವರೆಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಊಟ ಮಾಡಿದ ಬಾಳೆ ಎಲೆ ಮೇಲೆ ಉರುಳು ಸೇವೆ ಮಾಡಿ, ನದಿಯಲ್ಲಿ ಮುಳುಗಿದರೆ ಶಾಪ ವಿಮೋಚನೆಯಾಗುತ್ತದೆ ಎಂಬ ನಂಬಿಕೆ ರೂಢಿಯಲ್ಲಿತ್ತು. ಇದನ್ನು ಮಡೆಸ್ನಾನ ಎಂದು ಕರೆಯಲಾಗುತ್ತಿತ್ತು. ಆದರೆ ಈ ಆಚರಣೆ ಶೋಷಣೆಗೆ ಕಾರಣವಾಗಿದೆ ಎಂದು ಆರೋಪಿಸಿ, ಇದನ್ನು ನಿಷೇಧಿಸಬೇಕೆಂದು ಪ್ರಗತಿಪರ ಸಂಘಟನೆಗಳು ಒತ್ತಾಯಿತಸಿದ್ದವು.

SCROLL FOR NEXT