ದೇಶ

280 ಕೋಟಿ ಆನ್ ಲೈನ್ ವಂಚನೆ: ಐವರ ಬಂಧನ

Mainashree

ಬೆಂಗಳೂರು: ಆನ್ ಲೈನ್ ಮೂಲಕ ಹಣ ಡಬ್ಲಿಂಗ್ ಮಾಡುವುದಾಗಿ ನಂಬಿಸಿ ಸಾವಿರಾರು ಮಂದಿಗೆ ರು.280 ಕೋಟಿಗೂ ಹೆಚ್ಚು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೆ.ಆರ್.ಪುರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮುಖ್ಯ ಆರೋಪಿ, ಆಂಧ್ರ ಮೂಲದ ದಾಮೋದರ್ ರೆಡ್ಡಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಆರೋಪಿ ರೆಡ್ಡಿ, ಚೈನ್ಲಿಂಕ್ ವ್ಯವಹಾರ ಮಾದರಿಯಲ್ಲಿ ವ್ಯವಹಾರ ನಡೆಸುತ್ತಿದ್ದ. ಡಿಡಿಡಿ ವೆಬ್ಸೈಟ್ ವೀಕ್ಷಣೆ ಹೆಸರಿನಲ್ಲಿ ಸಾರ್ವಜನಿಕರಿಂದ ಸದಸ್ಯತ್ವ ಶುಲ್ಕವಾಗಿ ಮೂರ್ನಾಲ್ಕು ಸಾವಿರ ಸ್ವೀಕರಿಸುತ್ತಿದ್ದ. ಒಂದು ವೇಳೆ ಸದಸ್ಯರು ಮತ್ತಿಬ್ಬರನ್ನು ಪರಿಚಯಿಸಿದರೆ ಶೇ.25ರಷ್ಟು ಕಮಿಷನ್ ನೀಡುವ ಆಮಿಷ ನೀಡುತ್ತಿದ್ದ.

ಕೆ.ಆರ್.ಪುರದಲ್ಲಿ ಕಚೇರಿ ಹೊಂದಿದ್ದಾಗಿ ತಿಳಿಸಿದ್ದ ರೆಡ್ಡಿ ಹಲವರ ವಿಶ್ವಾಸವನ್ನೂ ಗಳಿಸಿದ್ದ. ಈತನ ಮಾತು ನಂಬಿ ಬೆಂಗಳೂರು ಸೇರಿ ರಾಜ್ಯದ ಸಾವಿರಾರು ಮಂದಿ ವೆಬ್ಸೈಟ್ನ ಸದಸ್ಯತ್ವ ಪಡೆದಿದ್ದರು. ಹೀಗೆ ಕೋಟ್ಯಂತರ ರುಪಾಯಿ ಸಂಗ್ರಹವಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಇತ್ತೀಚೆಗೆ ಮೈಸೂರು ಮೂಲದ ಶ್ರೀನಿವಾಸ್ ಎಂಬುವರು ರೆಡ್ಡಿಯಿಂದ ವಂಚನೆಗೊಳಾಗಿದ್ದಾಗಿ ಹೇಳಿ ಕೆ.ಆರ್.ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

SCROLL FOR NEXT