ನವದೆಹಲಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಕೆಫೆ ಮೇಲಿನ ಉಗ್ರರ ದಾಳಿ ಅಮಾನವೀಯ ಕೃತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಕೆಫೆ ಮೇಲೆ ಉಗ್ರರು ದಾಳಿ ನಡೆಸಿರುವುದು ಅಮಾನವೀಯ ಹಾಗೂ ದುರಾದೃಷ್ಟಕರ. ಉಗ್ರರು ಒತ್ತಾಯಾಳುಗಳಾಗಿ ಇಟ್ಟುಕೊಂಡಿರುವವರ ಅಮಾಯಕರ ಸುರಕ್ಷತೆಗಾಗಿ ಪಾರ್ಥಿಸುತ್ತೇನೆ ಎಂದಿದ್ದಾರೆ.
ಸಿಡ್ನಿಯ ಒಪೆರಾ ಹೌಸ್ ಕಟ್ಟಡಲ್ಲಿರುವ ಕೆಫೆಯ ಮೇಲೆ ದಾಳಿ ಮಾಡಿರುವ ಶಸ್ತ್ರ ಸಜ್ಜಿತ ಉಗ್ರರು, ಕೆಫೆಯಲ್ಲಿದ್ದ 50 ಮಂದಿಯನ್ನು ಒತ್ತಾಯಾಳಗಿರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.