ಭಾರತದ ಶ್ರೀಮಂತ ಹಳ್ಳಿ ಗುಜರಾತಿನ 'ಧರ್ಮಜ್‌' 
ದೇಶ

ಭಾರತದ ಅತ್ಯಂತ ಶ್ರೀಮಂತ ಹಳ್ಳಿ ಗುಜರಾತಿನ 'ಧರ್ಮಜ್‌'

ಪ್ರತಿ ಕುಟುಂಬದಿಂದಲೂ ಒಬ್ಬೊಬ್ಬ ಸದಸ್ಯರು ಹಲವು ವರ್ಷಗಳಿಂದ ವಿದೇಶಗಳಲ್ಲಿ ನೆಲೆಸಿದ್ದಾರೆ...

ವಡೋದರ: ಕೇರಳದ ಗ್ರಾಮವೊಂದರ ಬ್ಯಾಂಕಿನಲ್ಲಿ ಅನಿವಾಸಿ ಭಾರತೀಯರಿಂದ ಬರೋಬ್ಬರಿ ರೂ. 90 ಸಾವಿರ ಕೋಟಿ ಠೇವಣಿ ಇಡುವ ಮೂಲಕ ಅತಿ ಶ್ರೀಮಂತ ಹಳ್ಳಿ ಎಂಬ ಖ್ಯಾತಿ ಪಡೆದಿತ್ತು. ಆದರೆ ಇದೀಗ ಗುಜರಾತಿನ ವಡೋದರದಲ್ಲಿರುವ ಹಳ್ಳಿಯೊಂದರ ಬ್ಯಾಂಕುಗಳಲ್ಲಿ ಸುಮಾರು 1000 ಕೋಟಿ ಠೇವಣಿ ಇಡುವ ಮೂಲಕ ಕೇರಳದ ಗ್ರಾಮವನ್ನು ಹಿಂದಿಕ್ಕಿದೆ.

ಗುಜರಾತಿನ ಆನಂದ್ ಜಿಲ್ಲೆಯಲ್ಲಿರುವ ಪುಟ್ಟ ಹಳ್ಳಿಯೇ ಧರ್ಮಜ್. ಅಂದ ಹಾಗೆ ಈ ಹಳ್ಳಿಯಲ್ಲಿನ ಜನಸಂಖ್ಯೆ ಎಷ್ಟು ಗೊತ್ತೆ ಕೇವಲ 11,333.

ಈ ಹಳ್ಳಿಯಿಂದ ವಿದೇಶಕ್ಕೆ ತೆರಳಿರುವ ಅನಿವಾಸಿ ಭಾರತೀಯರು, ಹಲವು ವರ್ಷಗಳಿಂದ ಈ ಹಳ್ಳಿಯ ಬ್ಯಾಂಕುಗಳಲ್ಲಿ ಠೇವಣಿ ಇಡಲು ಪ್ರಾರಂಭಿಸಿದ್ದು, ಇಂದಿಗೆ ಅದರ ಮೌಲ್ಯ ಸಾವಿರ ಕೋಟಿ ದಾಟಿದೆ. ಈ ಮೂಲಕ ಧರ್ಮಜ್ ಭಾರತದಲ್ಲೇ ಅತ್ಯಂತ ಶ್ರೀಮಂತ ಹಳ್ಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ವಡೋದರ ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೆಜರ್ ಆರ್.ಎನ್.ಹೈರ್‌ವೇ ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಈ ಗ್ರಾಮದ ಅನಿವಾಸಿ ಭಾರತೀಯರು, ಧರ್ಮಜ್‌ನ ಸರ್ಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡಲು ಪ್ರಾರಂಭಿಸಿದ್ದು, ಅದು ಇಂದಿಗೆ ಸಾವಿರ ಕೋಟಿ ಗಡಿ ದಾಟಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಧರ್ಮಜ್ ವಿದ್ಯಾವಂತ ಹಳ್ಳಿಯಾಗಿದ್ದು, ದೇಶದಲ್ಲೇ ಶ್ರೀಮಂತ ಹಳ್ಳಿಯಾಗಿ ಹೊರಹೊಮ್ಮಿದೆ.

ಧರ್ಮಜ್ ಗ್ರಾಮದಲ್ಲಿ ಸುಮಾರು 3 ಸಾವಿರ ಪಟ್ಟೇದಾರ್ ಕುಟುಂಬಗಳು ವಾಸಿಸುತ್ತಿವೆ. ಪ್ರತಿ ಕುಟುಂಬದಿಂದಲೂ ಒಬ್ಬೊಬ್ಬ ಸದಸ್ಯರು ಹಲವು ವರ್ಷಗಳಿಂದ ವಿದೇಶಗಳಲ್ಲಿ ನೆಲೆಸಿದ್ದಾರೆ.

ಧರ್ಮಜ್ ಗ್ರಾಮಸ್ಥರ ಪೈಕಿ ಸುಮಾರು 1,700 ಕುಟುಂಬಗಳು ಬ್ರಿಟನ್‌ನಲ್ಲಿ ನೆಲಸಿವೆ. ಸುಮಾರು 300 ಕುಟುಂಬಗಳು ಅಮೆರಿಕದಲ್ಲಿ ನೆಲಸಿವೆ. ಅಂತೆಯೇ 160 ಕುಟುಂಬಗಳು ನ್ಯೂಜಿಲೆಂಡ್‌ನಲ್ಲಿ, 200 ಕುಟುಂಬಗಳು ಕೆನಡಾ, 60 ಕುಟುಂಬಗಳು ಆಸ್ಟ್ರೇಲಿಯಾದಲ್ಲಿದ್ದಾರೆ. ಧರ್ಮಜ್ 11.333 ಜನಸಂಖ್ಯೆ ಹೊಂದಿದ್ದು, ಆ ಪೈಕಿ 3,120 ಕುಟುಂಬಗಳು ವಿದೇಶಗಳಲ್ಲಿ ನೆಲೆಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!