ದೇಶ

30 ಸಾವಿರ ವಜ್ರಗಳು!

ಲಂಡನ್: ರಷ್ಯಾದ ವಿಜ್ಞಾನಿಗಳಿಗೆ ಈಗ ಬಲುದೊಡ್ಡ ಸವಾಲು ಎದುರಾಗಿದೆ. ಗಣಿಯೊಂದರಲ್ಲಿ ಸಿಕ್ಕಿರುವ ಐದು ಮಿ.ಮಿ ವಿನ್ಯಾಸದ ಕಲ್ಲೊಂದರಲ್ಲಿ 30 ಸಾವಿರ ವಜ್ರಗಳಿವೆಯಂತೆ.

ಹೀಗಾಗಿ ಅದರ ಬಗ್ಗೆ ಬಹಳ ಕುತೂಹಲ ಉಂಟಾಗಿದೆಯಂತೆ. ಸದ್ಯ ಈ ವಿಶೇಷ ಕಲ್ಲು ಸಂಶೋಧನಾ ಕೇಂದ್ರ ವಸ್ತು ಸಂಗ್ರಹಾಲಯದಲ್ಲಿ ಇದೆ.

ಅತ್ಯಂತ ಸಣ್ಣದಾಗಿರುವ ಈ ಕಲ್ಲು ಆಸಕ್ತಿದಾಯಕವಾಗಿದೆ ಎಂದು ಟೆನ್ಸೆಸ್ಸಿ ವಿವಿಯ ಭೂಗರ್ಭಶಾಸ್ತ್ರ ವಿಭಾಗದ ವಿಜ್ಞಾನಿ ಲಾರಿ ಟೇಲರ್ ತಿಳಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಏಷ್ಯಾ ಭೂವಿಜ್ಞಾನ ಸಮ್ಮೇಳನದಲ್ಲಿ ಈ ಕಲ್ಲಿನ ಬಗ್ಗೆ ಸಂಶೋಧನಾತ್ಮ ವರದಿ ಮಂಡಿಸಲಾಗುತ್ತದೆ.

SCROLL FOR NEXT