ದೇಶ

ಪೊಲೀಸರ ಎದುರೇ ಆತ್ಮಹತ್ಯೆಗೆ ಆರೋಪಿ ಯತ್ನ

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರ ಬಗ್ಗೆ ಅವಹೇಳನಕಾರಿ ಲೇಖನ ಪ್ರಕಟಿಸಿದ ಆರೋಪ ಎದುರಿಸುತ್ತಿದ್ದ ಬಿ.ಹರೀಶ್ ಕುಮಾರ್ (36) ಬಂಧನದ ಭೀತಿಯಿಂದ ಪೊಲೀಸರ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸಂಪಿಗೆ ಹಳ್ಳಿ ಸಮೀಪದ ಶ್ರೀರಾಂಪುರದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಹರೀಶ್ ಅವರು 'ಡೀಲ್ ನಾರಾಯಣ' ಎಂಬ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ 18 ಲೇಖನಗಳನ್ನು ಪ್ರಕಟಿಸಿದ್ದಾರೆ. 'ಆಧಾರವಿಲ್ಲದೇ ದುರುದ್ದೇಶದಿಂದ ಈ ಲೇಖನಗಳನ್ನು ಬರೆದಿರುವುದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾರಾಯಣಗೌಡ ಅವರು ನ.3ರಂದು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಹರೀಶ್ ಫೇಸ್‌ಬುಕ್ ಖಾತೆ ಪರಿಶೀಲಿಸಲಾಗಿತ್ತು. ವಿಚಾರಣೆ ನಡೆಸಲು ಅವರ ಮನೆಗೆ ಹೋಗಿದ್ದೆವು. ಊಟ ಮಾಡುತ್ತಿದ್ದ ಹರೀಶ್, ಏಕಾಏಕಿ ಕೋಣೆಯೊಳಗೆ ಸೇರಿಕೊಂಡರು. ನನ್ನ ಸಾವಿಗೆ ನಾರಾಯಣಗೌಡ ಅವರೇ ಕಾರಣ ಎಂದು ಕೂಗುತ್ತಾ, ನೇಣು ಹಾಕಿಕೊಂಡು ಆಗ ಬಾಗಿಲು ಮುರಿದು ಕೋಣೆ ಪ್ರವೇಶಿಸಿ ನೇಣಿನ ಕುಣಿಕೆಯಿಂದ ಇಳಿಸಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

40 ವರ್ಷ ನಾರಾಯಣಗೌಡ ಅವರ ಜತೆ ಇದ್ದ ಹರೀಶ್, 2 ವರ್ಷಗಳಿಂದ ಅವರಿಂದ ದೂರಾಗಿದ್ದರು. ಇತ್ತೀಚೆಗೆ ಕರವೇ ಶಿವರಾಮೇಗೌಡ ಬಣ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವಿಷಯ ತಿಳಿದ ನಾರಾಯಣಗೌಡ ಮತ್ತು ಅವರ ಭಾಮೈದ ಮಧು, ಹರೀಶಗೆ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ 15 ದಿನಗಳ ಹಿಂದೆ

SCROLL FOR NEXT