ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ 
ದೇಶ

ಮತಾಂತರ ವಿರೋಧಿ ಕಾನೂನು ಬೆಂಬಲಿಸಲಿ

ಹಿಂದೂಗಳನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡುವುದು...

ಕೋಲ್ಕತ್ತಾ/ಕೊಚ್ಚಿ: ಹಿಂದೂಗಳನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡುವುದು ತಪ್ಪಲ್ಲವಾದರೆ, ಅನ್ಯ ಧರ್ಮಕ್ಕೆ ಮತಾಂತರಗೊಂಡವರನ್ನು ಹಿಂದೂಗಳಾಗಿ ಮರು ಮತಾಂತರ ಮಾಡುವುದೂ ತಪ್ಪಲ್ಲ. ಮತಾಂತರವನ್ನು ತಪ್ಪೆನ್ನುವವರು ಮತಾಂತರ ವಿರೋಧಿ ಕಾನೂನು ಜಾರಿಗೆ ತರಲು ಬೆಂಬಲ ನೀಡಲಿ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗವತ್, ಆಗ್ರಾದಲ್ಲಿ ಹಿಂದೂ ಸಂಘಟನೆಗಳು ನಡೆಸಿದ ಮರುಮತಾಂತರವನ್ನು ಬೆಂಬಲಿ ಮಾತನಾಡಿದ್ದಾರೆ.

ಮರು ಮತಾಂತರಕ್ಕೆ ಅಸಮ್ಮತಿಯಿದ್ದರೆ ಪ್ರತಿ ಪಕ್ಷಗಳು ಮತಾಂತರ ವಿರೋಧಿ ಕಾನೂನು ಜಾರಿಗೆ ಬೆಂಬಲ ನೀಡಲಿ. ಒಂದು ವೇಳೆ ಅನ್ಯ ಧರ್ಮದಲ್ಲಿರುವವರು ಹಿಂದೂಗಳಾಗಿ ಮತಾಂತರವಾಗುವುದು ತಪ್ಪಾದರೆ, ಹಿಂದೂಗಳನ್ನೂ ಅನ್ಯ ಧರ್ಮಕ್ಕೆ ಮತಾಂತರ ಮಾಡುವುದು ತಪ್ಪೇ. ಈ ವಿಚಾರಕ್ಕೆ ಸಂಬಂಧಿಸಿ ನಮ್ಮ ನಿಲುವು ಅಚಲ ಎಂದು ಹೇಳಿದ್ದಾರೆ ಭಾಗವತ್. ನಾವು ಬಲಿಷ್ಠ ಹಿಂದೂ ಸಮಾಜ ನಿರ್ಮಿಸಲು ಯತ್ನಿಸುತ್ತಿದ್ದೇವೆ. ಯಾರೂ ಸ್ವಇಚ್ಛೆಯಿಂದ ಹೊರಹೋಗಿಲ್ಲ. ಆಮಿಷವೊಡ್ಡಿ, ಒತ್ತಾಯಪೂರ್ವಕವಾಗಿ ಅವರನ್ನು ಅನ್ಯ ಧರ್ಮಕ್ಕೆ ಮತಾಂತರಿಸಲಾಗಿದೆ. ಕಳ್ಳಸಿಕ್ಕಿಬಿದ್ದಾಗ ನಮ್ಮ ಆಸ್ತಿಯನ್ನು ವಾಪಸ್ ಪಡೆಯುತ್ತಿದ್ದೇವೆ. ಇದರಲ್ಲಿ ಹೊಸತೇನಿದೆ?

ಭಾರತ ನಮ್ಮ ದೇಶ
ನಾವು ಅಕ್ರಮ ಪ್ರವೇಶ ಮಾಡಿದವರಲ್ಲ. ಹೊರಗಿನಿಂದ ಬಂದವರಲ್ಲ. ಹಾಗಾಗಿ ಹೆದರುವ ಅಗತ್ಯ ಇಲ್ಲ. ಇದು ನಮ್ಮ ದೇಶ, ನಮ್ಮ ಹಿಂದೂ ರಾಷ್ಟ್ರ. ನಾವು ಹಿಂದೆ ಕಳೆದುಕೊಂಡಿದ್ದನ್ನು ಈಗ ಮರುವಷ ಮಾಡಿಕೊಳ್ಲಲು ಪ್ರಯತ್ನಿಸುತ್ತಿದ್ದೇವೆ. ಹಿಂದೂ ಏಳ್ಗೆಯಿಂದ ಯಾರೂ ಭಯಪಡಬೇಕಾದ ಅಗತ್ಯ ಇಲ್ಲ.

ಇದರ ವಿರುದ್ಧ ಯಾರಾದರೂ ಧ್ವನಿ ಎತ್ತುತ್ತಿದ್ದಾರೆಂದಾದರೆ ಅವರು ಸ್ವಾರ್ಥಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗೆ ಬಲಿಯಾದವರೇ ಆಗಿರಬೇಕು. ಹಿಂದೂ ಸಮಾಜ ಯಾವತ್ತು ಇತರರನ್ನು ದಮನಿಸುವುದಲ್ಲಿ ನಂಬಿಕೆ ಇಟ್ಟಿಲ್ಲ. 100 ತಪ್ಪನ್ನು ಕ್ಷಮಿಸು, ಅದರಾಚೆಗೂ ತಪ್ಪು ನಡೆದರೆ ಕೈಕಟ್ಟಿಕೂರ ಬೇಡ ಎಂದು ನಮ್ಮ ದೇವರೇ ಹೇಳುತ್ತಾರೆ ಎಂದು ಭಾಗವತ್ ಹೇಳಿದ್ದಾರೆ.

ಅಮಿತ್ ಶಾ ಬೆಂಬಲ
ನಾವು ಬಲವಂತದ ಮತಾಂತರ ವಿರೋಧಿಸುತ್ತೇವೆ. ಹಾಗಾಗಿ ನಾವು ಮತಾಂತರ ವಿರೋಧಿ ಕಾನೂನನ್ನು ಬೆಂಬಲಿಸುತ್ತೇವೆ. ತಮ್ಮನ್ನು ತಾವು ಜಾತ್ಯಾತೀತ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳೂ ಈ ಕಾನೂನಿಗೆ ಸಂಸತ್ತಿನಲ್ಲಿ ಬೆಂಬಲ ಸೂಚಿಸಬೇಕು!

ಮರು ಮತಾಂತರ ವಿವಾದ ಸಂಸತ್ತಿನಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ ಇದು. ಮತಾಂತರಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿರುವ ಬಲವಂತದ ಮತಾಂತರ ವಿರೋಧಿಸಿದ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಇನ್ನು ಮತಾಂತರ ವಿರೋಧಿ ಕಾನೂನು ಕುರಿತು ಎಲ್ಲ ಪಕ್ಷಗಳಲ್ಲಿ ಸಹಮತ ಮೂಡಿದ ಬಳಿಕವಷ್ಟೇ ಸಾರ್ವಜನಿಕ ಚರ್ಚೆ ನಡೆಯಲು ಸಾಧ್ಯ ಎಂದು ಅವರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Madhya Pradesh: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ': ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

2026 T20 World Cup: ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

SCROLL FOR NEXT