ಲಖನೌ: ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆ ದೇಶದ ಮೊದಲ ಉಗ್ರಗಾಮಿ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂ ಖಾನ್ ಹೇಳಿದ್ದಾರೆ.
ನಾಥುರಾಮ್ ಗೋಡ್ಸೆಯನ್ನು ವೈಭವೀಕರಿಸುವ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡ ಅಜಂ ಖಾನ್, ಮಹಾತ್ಮ ಗಾಂಧಿಜೀಯನ್ನು ಕೊಂದ ನಾಥುರಾಮ್ ಗೋಡ್ಸೆ ಈ ದೇಶದ ಮೊದಲ ಉಗ್ರ ಎಂದು ಟೀಕಿಸಿದ್ದಾರೆ.
ಆರೆಸ್ಸೆಸ್ ಹಾಗೂ ಇತರ ಬಲಪಂಧೀಯ ಸಂಘಟನೆಗಳ ಬಗ್ಗೆ ಅಸಮಾಧನಗೊಂಡು ಮೋದಿ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ಅಜಂ ಖಾನ್, ನರೇಂದ್ರ ಮೋದಿ ಇಂಥ ನಿರ್ಧಾರ ತೆಗೆದುಕೊಳ್ಳುವ ಸಂಭವವೇ ಇಲ್ಲ ಎಂದರು.
ದೇಶದಲ್ಲಿ ಅಧ್ಯಕೀಯ ಮಾದರಿ ಸರ್ಕಾರ ರಚನೆಗೆ ಪ್ರಧಾನಿ ಮೋದಿ ಅವರು ಒಲವು ಹೊಂದಿದ್ದಾರೆ. ಅದಕ್ಕಾಗಿ ಸಂವಿಧಾನದಲ್ಲಿ ಬದಲಾವಣೆಯನ್ನು ತರಲು ಯತ್ನಿಸುತ್ತಿದ್ದಾರೆ ಎಂದು ಅಜಂ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.