ದೇಶ

ಇಸಿಸ್ ಉಗ್ರರು-ಸಂತ್ರಸ್ತರ ಮುಖಾಮುಖಿ

ಕಂಡ ಕಂಡಲ್ಲಿ ಸ್ಫೋಟ ನಡೆಸಿ ಅಮಾಯಕರ ಸಾವಿಗೆ ಮುಹೂರ್ತ ಬರೆದ ಉಗ್ರರು...

ಬಾಗ್ದಾದ್: ಕಂಡ ಕಂಡಲ್ಲಿ ಸ್ಫೋಟ ನಡೆಸಿ ಅಮಾಯಕರ ಸಾವಿಗೆ ಮುಹೂರ್ತ ಬರೆದ ಉಗ್ರರು ಮತ್ತು ಸ್ಫೋಟದಿಂದಾಗಿ ತಮ್ಮವರನ್ನು ಕಳೆದುಕೊಂಡ ಸಂತ್ರಸ್ತರು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾದರೆ ಏನಾಗಬಹುದು?

ಇರಾಕ್ ನ ಟಿವಿ ಚಾನೆಲ್ವೊಂದು ಇಂತಹ ಕಾರ್ಯಕ್ಕೆ ಕೈಹಾಕಿದೆ. ದೋಷಿ ಎಂದು ಸಾಬೀತಾದ ಇಸಿಸ್ ಉಗ್ರರನ್ನು ವೇದಿಕೆಗೆ ಕರೆದು ಅವರೆದುರು ಸಂತ್ರಸ್ತರನ್ನು ನಿಲ್ಲಿಸುವ ರಿಯಾಲಿಟಿ ಶೋವನ್ನು ಸರ್ಕಾರಿ ಸ್ವಾಮ್ಯದ ಅಲ್-ಇರಾಕಿಯಾ ಚಾನೆಲ್ ಹಮ್ಮಿಕೊಂಡಿದೆ. ಈ ಮೂಲಕ ಇರಾಕ್ ಜನತೆಗೆ ಇಸಿಸ್ ವಿರೋಧಿ ನಿಲುವು ಬರುವಂತೆ ಹಾಗೂ ಸೇನೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡಲಾಗುತ್ತಿದೆ.

ಪ್ರತಿ ಶುಕ್ರವಾರ ಈ ರಿಯಾಲಿಟಿ ಷೋ ನಡೆಯುತ್ತಿದೆ. ಇಸಿಸ್ನಿಂದ ಬೆದರಿಕೆ ಎದುರಿಸುತ್ತಿರುವ ಪತ್ರಕರ್ತ ಅಹ್ಮದ್ ಹಸನ್ ಕಾರ್ಯಕ್ರಮ ನಿರೂಪಿಸುತ್ತಾರೆ. ಕೈಗೆ ಸರಪಳಿ ಹಾಕಿರುವ, ಹಳದಿ ಬಣ್ಣದ ಸಮವಸ್ತ್ರ ಧರಿಸಿರುವ ಕೈದಿಗಳು ಟಿವಿ ಚಾನೆಲ್ ಮುಂದೆ ತಾವು ನಿರ್ವಹಿಸಿದ ಉಗ್ರ ಕೃತ್ಯಗಳ ಬಗ್ಗೆ ವಿವರಿಸುತ್ತಾರೆ.

ನಂತರ ಅವರೆದುರಿಗೆ ದಾಳಿಯಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡವರು, ಅಂಗವಿಕಲರಾದವರನ್ನು ಕರೆತರಲಾಗುತ್ತದೆ. ಈ ವೇಳೆ ಕೆಲವರಂತೂ ಉಗ್ರರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ, ಇನ್ನು ಕೆಲವರು ನೋವಿನಿಂದ ಅಳುತ್ತಾರೆ.

ಕಳೆದು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಂತ್ರಸ್ತರೊಬ್ಬರು, 'ಇವನನ್ನು ನನಗೆ ಕೊಡಿ, ನಾನಿವನನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ' ಎಂದು ಉಗ್ರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ತಂದೆಯನ್ನು ಕಳೆದುಕೊಂಡ ಮತ್ತೊಬ್ಬ ಯುವಕನನ್ನು ವೀಲ್ಚೇರ್ನಲ್ಲಿ ಕರೆತರಲಾಯಿತು. ಆತ ಉಗ್ರನನ್ನು ನೋಡಿದ ಇಸಿಸ್ ಉಗ್ರ ಕೂಡ ಕಣ್ಣೀರಿಟ್ಟ. ತಾನು ಮಾಡಿದ್ದು ತಪ್ಪು ಎಂದು ಪಶ್ಚಾತ್ತಾಪಪಟ್ಟ. ಈ ಕಾರ್ಯಕ್ರಮದ ಮೂಲಕ ಜನರಲ್ಲಿ ಇಸಿಸ್ನ ಕ್ರೌರ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದಿದ್ದಾರೆ ಪತ್ರಕರ್ತ ಹಸನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

Encounter: ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲೀಯರ ಹತ್ಯೆ!

SCROLL FOR NEXT