ಕರಾಚಿ: ಪೇಶಾವರ ದಾಳಿ ಸರಿ ಎಂದು ಪಾಕಿಸ್ತಾನದ ಧರ್ಮಗುರು ಮುಲ್ಲಾಬರ್ಕಾವಿನ ಹೇಳಿಕೆಗೆ ಪಾಕಿಸ್ತಾನ ಸರ್ಕಾರ ಖಂಡನೆ ವ್ಯಕ್ತಪಡಿಸಿದ್ದು, ಆತನ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ.
ಡಿಸೆಂಬರ್ 16 ರಂದು ಪೇಶಾವರ ಸೈನಿಕ ಶಾಲಾ ಮಕ್ಕಳ ಮೇಲೆ ತಾಲಿಬಾನಿ ನರಹಂತಕರು ದಾಳಿ ನಡೆಸಿ 140ಕ್ಕೂ ಹೆಚ್ಚು ಮುಗ್ಧ ಮಕ್ಕಳನ್ನು ಬಲಿತೆಗೆದುಕೊಂಡ ಘಟನೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು.
ಈ ಘಟನೆಯನ್ನು ಕುರಿತು ಪ್ರತಿಕ್ರಿಯಿಸಿದ ಪಾಕಿಸ್ತಾನದ ಧರ್ಮಗುರು ಮುಲ್ಲಾ ಬರ್ಕಾ, ತಾಲಿಬಾನಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.
ಡಿ.19ರಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಬರ್ಕಾ ತಾಲಿಬಾನಿಗಳು ನಮ್ಮ ಸಹೋದರರು. ಅವರು ನಡೆಸಿದ ದಾಳಿ ನ್ಯಾಯ ಸಮ್ಮತವಾಗಿದೆ ಎಂದು ಹೇಳಿಕೆ ನೀಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಮುಲ್ಲಾ ಬರ್ಕಾ ಹೇಳಿಯನ್ನು ತೀವ್ರವಾಗಿ ಖಂಡಿಸಿರುವ ಪಾಕಿಸ್ತಾನ ನ್ಯಾಯಾಲಯ ಆತನ ಬಂಧನಕ್ಕಾಗಿ, ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ.
ಪಾಕಿಸ್ತಾನದ ಸೈನಿಕ ಶಾಲಾ ಮಕ್ಕಳನ್ನು ಬಲಿ ತೆಗೆದುಕೊಂಡ ತಾಲಿಬಾನಿ ಕೃತ್ಯಕ್ಕೆ ವಿಶ್ವಾದ್ಯಂತ ಖಂಡನೆ ವ್ಯಕ್ತವಾಗಿತ್ತು