ದೇಶ

ಆಂಧ್ರದಲ್ಲಿ 'ಕಿಸ್ಸಿಂಗ್ ಬಾಬಾ' ಬಂಧನ

ಮಹಿಳಾ ಭಕ್ತಾದಿಗಳ ಅನಾರೋಗ್ಯ ಮತ್ತು ಸಮಸ್ಯೆಗಳನ್ನು ನಿವಾರಿಸುತ್ತೇನೆ ಎಂದು...

ಹೈದ್ರಾಬಾದ್: ಮಹಿಳಾ ಭಕ್ತಾದಿಗಳ ಅನಾರೋಗ್ಯ ಮತ್ತು ಸಮಸ್ಯೆಗಳನ್ನು ನಿವಾರಿಸುತ್ತೇನೆ ಎಂದು ಹೇಳುತ್ತಾ ಅವರನ್ನು ಅಪ್ಪಿ, ಚುಂಬಿಸುತ್ತಿದ್ದ ನಕಲಿ ಬಾಬಾನನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ.

ಕಿಸ್ಸಿಂಗ್ ಬಾಬಾ ಎಂದೇ ಹೆಸರು ಪಡೆದಿದ್ದ ನಕಲಿ ದೇವಮಾನವನ್ನು ಕಡಪ ಜಿಲ್ಲೆಯ ಪ್ರೊಡ್ಡಟರ್ ಎಂಬ ಪ್ರದೇಶದಲ್ಲಿ ಗುರುವಾರ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆತನನ್ನು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ನಕಲಿ ಬಾಬಾ ಅಸ್ವಸ್ಥ ಮನಸ್ಸಿನಂತೆ ಕಂಡು ಬಂದಿದ್ದು ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಪರೀಕ್ಷೆ ಒಳಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

ಅಲ್ಲದೇ, ನಕಲಿ ಬಾಬಾನ ಶಿಷ್ಯ ಸುಬ್ಬಾರೆಡ್ಡಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ಕೈಗೊಂಡಿದ್ದಾರೆ. ಈತ, ಬಾಬಾ ಮಹಿಳೆಯರಿಗೆ ಬಂದಿರುವಂತಹ ರೋಗಗಳನ್ನು ಗುಣಪಡಿಸುತ್ತಾರೆ, ಅಲ್ಲದೇ ಹಣಕಾಸು ತೊಂದರೆಯನ್ನು ನಿವಾರಿಸುತ್ತಾರೆ ಎಂದು ಹೇಳಿ ಮಹಿಳೆಯರನ್ನು ವಂಚಿಸುತ್ತಿದ್ದನು ಎಂದು ಹೇಳಲಾಗುತ್ತಿದೆ.

ಕಳೆದ ಎರಡು ತಿಂಗಳಿನಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹಿಂದೆ ಬೀಡೂರಿದ್ದ ಈ ಬಾಬಾ ಬಳಿ ನವದಂಪತಿಗಳು ಹೆಚ್ಚಾಗಿ ಬರುತ್ತಿದ್ದರು. ಬಂದ ಮಹಿಳಾ ಭಕ್ತಾದಿಗಳನ್ನು ಅಪ್ಪಿ, ಚುಂಬಿಸಿ, ಅಸಭ್ಯವಾಗಿ ವರ್ತಿಸುತ್ತಿದ್ದನು. ಆದರೆ ಪುರುಷ ಭಕ್ತಾದಿಗಳಿಗೆ ಕೇವಲ ನಿಂಬೆ ಹಣ್ಣುಕೊಟ್ಟು ಕಳುಹಿಸುತ್ತಿದ್ದ ಎಂಬುದನ್ನು ಖಾಸಗಿ ವಾಹಿನಿಯೊಂದು ಸುದ್ದಿ ಮಾಡಿತ್ತು. ಇದರ ಪರಿಣಾಮವಾಗಿ ಪೊಲೀಸರು ಆತನನ್ನು ಬಂಧಿಸಿದ್ದು, ವಿಚಾರಣೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT