ದೇಶ

ಚರ್ಚಿಲ್‌ಗೆ ಇಸ್ಲಾಂಗೆ ಮತಾಂತರವಾಗುವ ಬಯಕೆಯಿತ್ತೆ?

Rashmi Kasaragodu

ಲಂಡನ್: ಬ್ರಿಟನ್‌ನ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದ ವಿನ್‌ಸ್ಟನ್ ಚರ್ಚಿಲ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವ ಇಚ್ಛೆ ಹೊಂದಿದ್ದರೆ?

ಚರ್ಚಿಲ್ ಅವರ ಭಾವಿ ಅತ್ತಿಗೆ ಬರೆದಿದ್ದ ಪತ್ರವೊಂದು ಈ ಅನುಮಾನವನ್ನು ನಿಜವಾಗಿಸಿದೆ. ನಾಝಿಗಳಿಂದ ಬ್ರಿಟನ್ ಸಾಮ್ರಾಜ್ಯವನ್ನು ರಕ್ಷಿಸಲೆಂದು ಶ್ರಮಿಸಿದ್ದ ಚರ್ಚಿಲ್ ಅವರು ಇಸ್ಲಾಂ ಧರ್ಮದ ಬಗ್ಗೆ ಅತೀವ ಒಲವು ಹೊಂದಿದ್ದರು. ಇದು ಅವರ ಸಂಬಂಧಿಕರಲ್ಲೇ ಆತಂಕಕ್ಕೆ ಕಾರಣವಾಗಿತ್ತು. ಚರ್ಚಿಲ್ ಅವರು ಎಲ್ಲಿ ಇಸ್ಲಾಂಗೆ ಮತಾಂತರವಾಗುತ್ತಾರೋ ಎಂಬ ಭಯ ಎಲ್ಲರಲ್ಲಿ ಮೂಡಿತ್ತು ಎನ್ನುವುದನ್ನು ಲೇಡಿ ಗ್ವೆಂಡೋಲಿನ್ ಬರ್ಟಿ ಅವರು ಬರೆದ ಪತ್ರವು ಸ್ಪಷ್ಟಪಡಿಸಿದೆ.

ಕ್ಯಾಂಬ್ರಿಡ್ಜ್ ವಿಶ್ವ ವಿದ್ಯಾಲಯದ ಇತಿಹಾಸ ಸಂಶೋಧಕ ವಾರೆನ್ ಡಾಕ್ಟರ್ ಅವರು ಈ ಪತ್ರವನ್ನು ಬಹಿರಂಗಪಡಿಸಿದ್ದಾರೆ. 1907ರ ಆಗಸ್ಟ್‌ನಲ್ಲಿ ಚರ್ಚಿಲ್ ಅವರಿಗೆ ಪತ್ರ ಬರೆದಿದ್ದ ಗ್ವೆಂಡೋಲಿನ್  (ಚರ್ಚಿಲ್‌ರ ಸೋದರನ ಪತ್ನಿ), ನಿಮಗೆ ಇಸ್ಲಾಂ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಭಾರಿ ಒಲವಿರುವುದು ನನಗೆ ಗೊತ್ತಿದೆ. ಆದರೆ ದಯವಿಟ್ಟು ಇಸ್ಲಾಂಗೆ ಮತಾಂತರಗೊಳ್ಳಬೇಡಿ ಎಂದು ಕೋರಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಚರ್ಚಿಲ್, ನೀವು ನನ್ನನ್ನು ಪಾಷಾ ಎಂದು ಭಾವಿಸಿದ್ದರೆ, ನಾನು ಅದೇ ಆಗಿರಲು ಇಚ್ಛಿಸುತ್ತೇನೆ ಎಂದಿದ್ದರು.

SCROLL FOR NEXT