ದೇಶ

ಉ.ಪ್ರದೇಶದಲ್ಲಿ ಚಳಿಯ ತೀವ್ರತೆಗೆ 24 ಸಾವು, ದೆಹಲಿಯಲ್ಲಿ ವಿಮಾನ, ರೈಲು ಸಂಚಾರ ಅಸ್ತವ್ಯಸ್ತ

Lingaraj Badiger

ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಿದ್ದು, ಶೀತ ಗಾಳಿಯಿಂದಾಗಿ ಉತ್ತರ ಪ್ರದೇಶದಲ್ಲಿ 24 ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಮಂಜು ಕವಿದ ವಾತಾವರಣದಿಂದಾಗಿ ವಿಮಾನ ಸಂಚಾರ ಹಾಗೂ ರೈಲು ಸಂಚಾರದಲ್ಲಿ ತೀವ್ರ ಅಸ್ತವ್ಯಸ್ತವಾಗಿದೆ.

ದೆಹಲಿ ಹಾಗೂ ಅಮೃತಸರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ತಾಪಮಾನ ಶೂನ್ಯ ಡಿ.ಸೆ.ವರೆಗೆ ತಲುಪಿದೆ. ಅಲ್ಲದೆ ಎಲ್ಲೆಲ್ಲೂ ದಟ್ಟ ಮಂಜು ಆವರಿಸಿದ್ದು, ಇಂದು 60 ವಿಮಾನಗಳು ಹಾಗೂ 100 ರೈಲುಗಳ ಸಂಚಾರ ವಿಳಂಬವಾಗಿದೆ.

ಉತ್ತರ ಪ್ರದೇಶದಲ್ಲಿ ಶೀತ ಗಾಳಿಯಿಂದಾಗಿ ಸುಮಾರು ಎರಡು ಡಜನ್ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ನಾಗ್ಪುರದಲ್ಲಿ 45 ವರ್ಷಗಳಲ್ಲೇ ಮೊದಲ ಬಾರಿಗೆ ಸೋಮವಾರ ತಾಪಮಾನ 5 ಡಿ.ಸೆ.ಗೆ ತಲುಪಿದೆ. ಇನ್ನು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ 4.1 ಡಿ.ಸೆ. ತಾಪಮಾನ ದಾಖಲಾಗಿದೆ.

SCROLL FOR NEXT