ದೇಶ

ಪಾಕ್ ಶಸ್ತ್ರಾಸ್ತ್ರ ವಿಮಾನಗಳಿಗೆ ನಿರ್ಬಂಧ

ಅಕ್ರಾ(ಘಾನಾ): ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯುವ ನೈಜೀರಿಯಾದ ಕಾರ್ಗೋ ವಿಮಾನಗಳಿಗೆ ತನ್ನ ವಾಯುಮಂಡಲ ಸೀಮೆಯ ಮೇಲಿಂದ ಹಾದೂ ಹೋಗಲು ಸೌದಿ ಅರೇಬಿಯಾ ಸರ್ಕಾರ ಅನುಮತಿ ನಿರಾಕರಿಸಿದೆ.
 ನೈಜೀರಿಯಾದ ಈಶಾನ್ಯ ಭಾಗದಲ್ಲಿ ತನ್ನ ವಿರುದ್ಧ ಬಂಡೆದ್ದಿರುವ ಬೋಕೋ ಹರಾಂ ಉಗ್ರ ಬಂಡೆದ್ದಿರುವ ಬೋಕೋ ಹರಾಂ ಉಗ್ರ ಸಂಘಟನೆಯನ್ನು ಮಟ್ಟಹಾಕಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ತನ್ನ ಮಿತ್ರ ರಾಷ್ಟ್ರಗಳಾದ ಅಮೆರಿಕೆ ನೇತೃತ್ವದ ದೇಶಗಳನ್ನು ಹೊರತು ಪಡಿಸಿ ಇತರ ರಾಷ್ಟ್ರಗಳಿಂದ ಶಸ್ತ್ರಾಸ್ತ್ರಗಳನ್ನು ತರಿಸಲು ಅಲ್ಲಿನ ಅಧ್ಯಕ್ಷ ಗುಡ್‌ಲಕ್ ಜೊನಾಥನ್ ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪಾಕ್‌ನಿಂದ ನೈಜೀರಿಯಾ ಸೇನೆಗೆ ಶಸ್ತ್ರಾಸ್ತ್ರ ಸರಬರಾಜಾಗುತ್ತಿದೆ. ಹಾಗಾಗಿ, ಪಾಕ್‌ನಿಂದ ಶಸ್ತ್ರಾಸ್ತ್ರಹೊತ್ತೊಯ್ಯುವ ವಿಮಾನಗಳು ಸೌದಿ ಅರೇಬಿಯಾ, ಸುಡಾನ್ ಸೇರಿ ಹಲವಾರು ರಾಷ್ಟ್ರಗಳ ವಾಯುಗಡಿಯ ಮೂಲಕ ಹಾದುಹೋಗಿ ನೈಜೀರಿಯಾವನ್ನು ಸೇರಬೇಕಿದೆ.

ಈ ಹಿನ್ನೆಲೆಯಲ್ಲಿ, ನೈಜೀರಿಯಾ ಸರ್ಕಾರ ತನ್ನ ಈ ವಿಮಾನಗಳು ಹಾದೂ ಹೋಗುವ ದೇಶಗಳನ್ನು ತಮ್ಮ ವಾಯುಮಂಡಲ ಮೂಲಕ ಸಾಗಿಹೋಗಲು ಪರವಾನಗಿ ಕೇಳಿತ್ತು. ಆದರೆ, ಸೌದಿ ಹೊರತುಪಡಿಸಿ ಮಿಕ್ಕೆಲ್ಲಾ ರಾಷ್ಟ್ರಗಳು ನೈಜೀರಿಯಾ ಬೇಡಿಕೆಯನ್ನು ಒಪ್ಪಿವೆ ಎಂದು ಮೂಲಗಳು ಹೇಳಿವೆ.

SCROLL FOR NEXT