ದೇಶ

ಮಹಾರಾಷ್ಟ್ರದಲ್ಲಿ 6 ಸಾವಿರ ಜನ ಮತಾಂತರಕ್ಕೆ ಸಜ್ಜು

Lakshmi R

ಮುಂಬೈ: ಮಹಾರಾಷ್ಟ್ರದಲ್ಲಿ ಹಿಂದುಳಿದ ವರ್ಗಗಳ ಸುಮಾರು 6 ಸಾವಿರ ಮಂದಿ ಬೌದ್ಧ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿರುವ ವಿಚಾರ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಮತಾಂತರ ವಿಚಾರ ಬಾರಿ ಸುದ್ದಿಯಾಗುತ್ತಿದೆ. ಕ್ರೈಸ್ತ, ಮುಸ್ಲಿಂ ಧರ್ಮಗಳಿಗೆ ಮತಾಂತರವಾಗಿರುವವನ್ನು ಮತ್ತೆ ಹಿಂದು ಧರ್ಮಕ್ಕೆ ಮತಾಂತಗೊಳಿಸಲು ಕೆಲ ಹಿಂದು ಸಂಘಟನೆಗಳು ಪ್ರಯತ್ನಿಸುತ್ತಿರುವ ವಿಚಾರ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಈ ಮಧ್ಯೆ ಮಹರಾಷ್ಟ್ರದಲ್ಲಿ 6 ಸಾವಿರ ಮಂದಿ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವ ವಿಚಾರ ಸಂಚಲನಕ್ಕೆ ಎಡೆ ಮಾಡಿಕೊಟ್ಟಿದೆ.

ಈ ಕುರಿತು ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಹಿಂದುಳಿದ ಪರಿಷತ್ ಕಾರ್ಯದರ್ಶಿ ಹುನುಮಂತ್ ಉಪಾರೆ, ನಾವು ಮೂಲತಃ ಬೌದ್ಧ ಧರ್ಮದವರು. ನಾವು ಮತಾಂತರಗೊಳ್ಳುತ್ತಿಲ್ಲ. ನಾವು ನಮ್ಮ ತಾಯಿ ಧರ್ಮಕ್ಕೆ ಹೋಗುತ್ತಿದ್ದೇವೆ ಎಂದು ವಿವರಿಸಿದರು.

ಇದುವೇ ನಿಜವಾದ ಘರ್ ವಾಪಸ್ಸಿಯಾಗಿದೆ. ನಾವೆಲ್ಲರು 2011ರಲ್ಲೇ ಮತಾಂತರಗೊಳ್ಳಲು ನಿರ್ಧರಿಸಿದ್ದೆವು. ಇಲ್ಲಿಯವರೆಗೆ ಸುಮಾರು 7 ಸಾವಿರ ಮಂದಿ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ.

19ನೇ ಶತಮಾನದಲ್ಲಿ ನಮ್ಮ ಹಿರಿಯರನ್ನು ಬಲವಂತವಾಗಿ ಹಿಂದುಧರ್ಮಕ್ಕೆ ಮತಾಂತರಗೊಳಿಸಲ್ಪಡಲಾಗಿತ್ತು. ಆದರೂ ನಾವು ಕ್ಷೂದ್ರರಂತೆ ನಡೆಸಲ್ಪಟ್ಟೆವು. ಹಿಂದೂ ಧರ್ಮದಿಂದ ನಾವು ಇನ್ನೂ ಅಭಿವೃದ್ಧಿಯ ಬೆಳಕು ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ಪುನಃ ನಮ್ಮ ಮೂಲ ಧರ್ಮವಾದ ಬೌದ್ಧಧರ್ಮಕ್ಕೆ ತೆರಳುತ್ತಿದ್ದು, 2016ರಲ್ಲಿ 6 ಸಾವಿರ ಮಂದಿ ಸಾಮೂಹಿಕವಾಗಿ ಮತಾಂತಗೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

SCROLL FOR NEXT