ದೇಶ

ಹೊಸ ವರ್ಷಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಕಡಿತ ಸಾಧ್ಯತೆ

Mainashree

ನವದೆಹಲಿ: ಹೊಸ ವರ್ಷಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿತಗೊಳ್ಳುವ ಸಾಧ್ಯತೆ ಇದೆ.

ಮಧ್ಯರಾತ್ರಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸುವ ಮೂಲಕ ಗ್ರಾಹಕರಿಗೆ ಹೊಸ ವರ್ಷದ ಉಡಗೊರೆ ನೀಡಲು ಕೇಂದ್ರ ಮುಂದಾಗಿದೆ ಎನ್ನಲಾಗುತ್ತಿದೆ.

ಒಂದೊಮ್ಮೆ ಕಡಿತ ಮಾಡಿದ್ದೇ ಆದಲ್ಲಿ ಒಂಭತ್ತನೇ ಬಾರಿ ಪೆಟ್ರೋಲ್ ಹಾಗೂ ಐದನೇ ಬಾರಿ ಡೀಸೆಲ್ ಬೆಲೆಯನ್ನು ಇಳಿಸಿದಂತಾಗುತ್ತದೆ.

SCROLL FOR NEXT