ದೇಶ

'ಸ್ಯಾನಿಟರಿ ನ್ಯಾಪ್ಕಿನ್' ಹೋರಾಟಕ್ಕೆ ಕೇರಳ ಸಜ್ಜು

Lakshmi R

ಕೊಚ್ಚಿ: ಸುಮಾರು 20 ಮಹಿಳೆಯರನ್ನು ಬೆತ್ತಲೆಯನ್ನಾಗಿ ತಪಾಸಣೆ ಮಾಡಿದ ವಿಲಕ್ಷಣ ಘಟನೆ ಕೇರಳದ ಕಾರ್ಖಾನೆಯೊಂದರಲ್ಲಿ ನಡೆದಿದ್ದು, ನಾಗರೀಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.

ಕೊಚ್ಚಿಯಲ್ಲಿರುವ ಅಸ್ಮಾ ರಬ್ಬರ್ ಪ್ರೈವೇಟ್ ಲಿಮಿಟೆಡ್ನಲ್ಲಿ ಡಿ.10 ರಂದು ಈ ನೀಚ ಘಟನೆ ನಡೆದಿದೆ. ಈ ಕಾರ್ಖಾನೆಯ ಶೌಚಾಲಯದಲ್ಲಿ ಓರ್ವ ಮಹಿಳೆ ತಾನು ಉಪಯೋಗಿಸಿದ್ದ ಸ್ಯಾನಿಟರಿ ನ್ಯಾಪ್ಕಿನನ್ನು ಹಾಕಿದ್ದಾಳೆ. ಶೌಚಾಲಯದಲ್ಲಿ ನ್ಯಾಪ್ಕಿನ್ ಹಾಕಬಾರದು ಎಂಬುದು ಆ ಕಾರ್ಖಾನೆಯ ನಿಯಮವಾಗಿದೆ.

ನಿಯಮ ಉಲ್ಲಂಘನೆಗೆ ಆಕ್ರೋಶಗೊಂಡಿದ್ದ ಕಾರ್ಖಾನೆಯ ಹಿರಿಯ ಸಿಬ್ಬಂದಿ, ಅಂದು ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆಯರೆಲ್ಲರನ್ನು ಬೆತ್ತಲೆಯನ್ನಾಗಿ ತಪಾಸಣೆ ಮಾಡಿದ ಘಟನೆ ಸಂಚಲನಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ಖಂಡಿಸಿ ತೀವ್ರ ಹೋರಾಟಕ್ಕೆ ಮುಂದಾಗಿರುವ ಕೇರಳದ ಸಾಮಾಜಿಕ ಸಂಸ್ಥೆಯೊಂದು 'ಸ್ಯಾನಿಟರಿ ನ್ಯಾಪ್ಕಿನ್' ಪ್ರತಿಭಟನೆಗೆ ಮುಂದಾಗಿದೆ.

ವಿಲಕ್ಷಣ ಘಟನೆಗೆ ಸಾಕ್ಷಿಯಾಗಿರುವ ಅಸ್ಮಾ ಕಾರ್ಖಾನೆಗೆ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ತಲುಪಿಸುವ ಹೋರಾಟ ನಡೆಸಲು ತೀರ್ಮಾನಿಸಿದ್ದು, ಫೇಸ್ಬುಕ್ನ ಮೂಲಕ ಚಾಲನೆ ನೀಡಿದೆ.

ಕಾರ್ಖಾನೆಯಲ್ಲಿ ನಡೆದ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ತೀವ್ರ ಹೋರಾಟಗಳು ನಡೆದಿದ್ದು, ಕೇಳರ ಹೈಕೋರ್ಟ್ ಈ ಸಂಬಂಧ ತನಿಖೆಗೆ ಆದೇಶ ಹೊರಡಿಸಿದೆ.

ಆಧುನಿಕ ತಂತ್ರಜ್ಞಾನ ಎಷ್ಟೇ ಅಭಿವೃದ್ಧಿಯಾಗಿದ್ದರೂ. ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳಿಗೆ ಮಾತ್ರ ಕೊನೆಯಿಲ್ಲದಂತಾಗಿದೆ.

SCROLL FOR NEXT