ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ಅರುಣ್ ಜೇಟ್ಲಿ. 
ದೇಶ

ಭಾರತದೊಂದಿಗೆ ಶಾಂತಿ, ಉಗ್ರರೊಂದಿಗೆ ಸ್ನೇಹ, ಆಯ್ಕೆ ಪಾಕ್‌ಗೆ ಬಿಟ್ಟದ್ದು: ಜೇಟ್ಲಿ

ನವದೆಹಲಿ: ಭಾರತದೊಂದಿಗೆ ಶಾಂತಿಯನ್ನು ಪಾಕಿಸ್ತಾನ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ ಅವರು, ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕೇ ಅಥವಾ ಭಾರತವನ್ನು ಒಡೆಯಲು ಹವಣಿಸುತ್ತಿರುವವರ ಜತೆ ಮಾತನಾಡಬೇಕೆ ಎಂಬುದನ್ನು ಪಾಕಿಸ್ತಾನ ಪ್ರಜ್ಞಾಪೂರ್ವಕವಾಗಿ ಆರಿಸಿಕೊಳ್ಳಬೇಕು ಎಂದು ಹೇಳಿದರು.

ಪಾಕಿಸ್ತಾನ ಜತೆ ಮಾತುಕತೆ ನಡೆಸಲು ಭಾರತ ಸಿದ್ಧವಿದೆ. ಅದರೊಂದಿಗೆ ಉಭಯ ದೇಶಗಳ ಸಂಬಂಧಗಳನ್ನು ಸ್ಥಿತಿಗೆ ತರಲು ಬಯಸುತ್ತಿದೆ. ಆದರೆ ಇದರ ನಡುವೆ ಕೆಲವೊಂದು ಕೆಂಪುಗೆರೆಗಳು ಅಡ್ಡವಾಗಿದೆ ಎಂದರು.

ಪಾಕ್ ಜತೆಗಿನ ಚರ್ಚೆಗೆ ನಾವು ಪೂರಕ ವಾತಾವರಣ ನಿರ್ಮಿಸಿ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗೆ ದಿನಾಂಕವನ್ನೂ ನಿಗದಿಪಡಿಸುತ್ತೇವೆ. ನಮ್ಮ ವಿದೇಶಾಂಗ ಕಾರ್ಯದರ್ಶಿಗಳು ಪಾಕ್‌ಗೆ ತೆರಳಬೇಕು ಎನ್ನುವಷ್ಟರದಲ್ಲಿ ಪಾಕ್ ತಮ್ಮ ಹೈಕಮಿಷನ್ ಜತೆ ಮಾತುಕತೆ ನಡೆಸಲು ಕಾಶ್ಮೀರ ಪ್ರತ್ಯೇಕವಾದಿಗಳನ್ನು ಆಹ್ವಾನಿಸುತ್ತಾರೆ ಎಂದು ದೂರಿದರು.

ಇದೇ ವೇಳೆ, ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ, ಭಾರತ ಯೋಧರ ನೆಲೆಗಳತ್ತ ಹಾಗೂ ಗಡಿ ಗ್ರಾಮಗಳ ಮೇಲೆ ದಾಳಿ ಮಾಡಿ ನಾಗರಿಕರ ಹತ್ಯೆ ಮಾಡುತ್ತಿರುವುದಕ್ಕೆ ಪಾಕ್ ಮುಂದೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಅರುಣ್ ಜೇಟ್ಲಿ ಎಚ್ಚರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!