ತಿರುಪತಿ: ಬಾರಿ ವಿವಾದದ ನಡುವೆಯೂ ಭಾರತಕ್ಕೆ ಭೇಟಿ ನೀಡಿರುವ ಶ್ರೀಲಂಕಾ ಪ್ರಧಾನಿ ಡಿ.ಎಂ.ಜಯರತ್ನೆ ತಮ್ಮ ಕುಟುಂಬ ಸಮೇತರಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ರೇಷ್ಮೆ ಬಟ್ಟೆಯನ್ನು ತಿಮ್ಮಪ್ಪನಿಗೆ ಅರ್ಪಿಸಿದ ಜಯರತ್ನೆ ತಿಮ್ಮಪ್ಪನ ಸನ್ನಿಧಿಯಲ್ಲಿ ಕೆಲ ಹೊತ್ತು ಕಾಲ ಕಳೆದರು. ಬಳಿಕ ಲಾಡು, ತೀರ್ಥ ಸೇರಿದಂತೆ ತಿರುಪತಿ ಪ್ರಸಾದವನ್ನು ಸ್ವೀಕರಿಸಿದರು ಎಂದು ಮೂಲಗಳು ತಿಳಿಸಿವೆ.
ಜಯರತ್ನೆ ಆಗಮನದ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದ ಸುತ್ತಮುತ್ತ ಭಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ರಾಜ್ಯದಲ್ಲಿ ನಾಳೆ ಮಣಿಪಾಲ ವಿಶ್ವವಿದ್ಯಾಲಯದ 19 ನೇ ಘಟಿಕೋತ್ಸವದ ಮುಖ್ಯ ಅಥಿತಿಯಾಗಿ ಭಾಗವಹಿಸಲು ಜಯವರ್ದನೆ ಭಾರತಕ್ಕೆ ಆಗಮಿಸಿದ್ದಾರೆ.
ತಿರುಪತಿಗೆ ಭೇಟಿ ನೀಡಲು ತಮಿಳುನಾಡಿನ ತಿರುಥಣಿ ಮಾರ್ಗವಾಗಿ ಆಗಮಿಸಿದ ಜಯವರ್ದನೆಯ ವಿರುದ್ದ ಎಂಡಿಎಂಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಿರುಥಣಿಯಲ್ಲಿ ಜಮಾಯಿಸಿದ 250ಕ್ಕೂ ಹೆಚ್ಚು ಎಂಡಿಎಂಕೆ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಭಾರತೀಯ 5 ಮೀನುಗಾರರಿಗೆ ಶ್ರೀಲಂಕಾ ನ್ಯಾಯಾಂಗ ಗಲ್ಲು ಶಿಕ್ಷೆ ನೀಡಿದ ವಿಚಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿದೆ.