ದೇಶ

ಅಲ್‌ಖೈದಾ ಜೊತೆ ಐಎಂ ವಿಲೀನ?

Lakshmi R

ನವದೆಹಲಿ: ಯಾಸಿನ್ ಭಟ್ಕಳ್‌ನಂಥ ಪ್ರಮುಖರ ಬಂಧನದಿಂದ ಹಿನ್ನಡೆ ಅನುಭವಿಸಿರುವ ಇಂಡಿಯನ್ ಮುಜಾಹಿದೀನ(ಐಎಂ) ಸಂಘಟನೆ ಭಾರದಲ್ಲಿ ರಕ್ತಪಾತ ಹರಿಸಲು ಹೊಸ ತಂತ್ರ ರೂಪಿಸಿದೆ.

ಅಂತರಾಷ್ಟ್ರೀಯ ಉಗ್ರ ಸಂಘಟನೆಯಾದ ಅಲ್‌ಖೈದಾ ಜತೆ ವಿಲೀನಗೊಳ್ಳಲು ಐಎಂ ಮುಂದಾಗಿದೆ. ಐಎಂ ಸಂಸ್ಥಾಪಕ ರಿಯಾಜ್ ಭಟ್ಕಳ್ ಹಾಗೂ ಆತನ ಆಪ್ತನ ನಡುವೆ ಈ ಹಿಂದೆ ನಡೆದಿರುವ ಇಂಟರ್ನೆಟ್ ಚಾಟಿಂಗ್ ಅನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಗುಪ್ತಚರ ಇಲಾಖೆ ಈ ಆಘಾತಕಾರಿ ವಿಚಾರ ಬಯಲು ಮಾಡಿದೆ.

ಈಗಾಗಲೇ ಐಎಂ ಸದಸ್ಯರು ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿರುವ ಉಗ್ರ ನೆಲೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇತ್ತ ಉತ್ತರ ಪ್ರದೇಶದಲ್ಲಿ ಅಲ್‌ಖೈದಾ ತನ್ನ ಹೊಸ ಶಾಖೆ ಆರಂಭಿಸಿದೆ.

ಭಾರತ ಸೇರಿದಂತೆ ದಕ್ಷಣ ಏಷ್ಯಾ ರಾಷ್ಟ್ರಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉದ್ದೇಶಿಸಿರುವ ಖೈದಾಗೆ ಬೆಂಬಲ ನೀಡಲು ಭಟ್ಕಳ್ ನಿರ್ಧರಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಖೈದಾ ಜೊತೆಗೆ ಹೆಚ್ಚುತ್ತಿರುವ ಬಾಂಧವ್ಯದ ಧ್ಯೋತಕವಾಗಿ ತನ್ನ ಸಂಘಟನೆಯನ್ನು ಅಲ್‌ಖೈದಾ ಜೊತೆ ವಿಲೀನಗೊಳಿಸುವ ಉದ್ದೇಶ ಹೊಂದಿದೆ.

SCROLL FOR NEXT