ಟೇಕಾಫ್ ಆಗಬೇಕಿದ್ದ ವಿಮಾನಕ್ಕೆ ಎಮ್ಮೆಯೊಂದು ಡಿಕ್ಕಿ ಹೊಡೆದು ಸ್ಪಲ್ಪದರಲ್ಲೇ ಅಪಘಾತ ತಪ್ಪಿರುವ ಘಟನೆ ಸೂರತ್ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದಿದೆ. ಇದೇ ನೆಪದಲ್ಲಿ, ಜಗತ್ತಿಲ್ಲಿ ಈವರೆಗೂ ವಿಮಾನ ನಿಲ್ದಾಣಗಳ ರನ್‌ವೇನಲ್ಲೇ ಉಂಟಾದ ಕೆಲ ಅಪಘಾತಗಳನ್ನು ಮೆಲುಕು ಹಾಕುವ ಪ್ರಯತ್ನ ಇಲ್ಲಿದೆ.
ಏರ್‌ಫ್ರಾನ್ಸ್‌ನ 4590
ಸ್ಥಳ: ಗಾಲೆ ನಿಲ್ದಾಣ(ಫ್ರಾನ್ಸ್)
ದಿನಾಂಕ: 25 ಜುಲೈ, 2000
ಕಾರಣ: ಟೇಕಾಫ್ ಆಗುತ್ತಿದ್ದಾಗ ರನ್‌ವೇನಲ್ಲಿದ್ದ ವಸ್ತುವೊಂದು ಇಂಧನ ಟ್ಯಾಂಕ್ ಬಡಿದು ಬೆಂಕಿ.
ಸಾವಿನ ಸಂಖ್ಯೆ: 100
ಟರ್ಕಿಷ್ ವಿಮಾನ 981
ಸ್ಥಳ: ಒರಲಿ ವಿಮಾನ ನಿಲ್ದಾಣ(ಫ್ರಾನ್ಸ್)
ದಿನಾಂಕ: ಮಾ.3, 1974
ಕಾರಣ: ಟೇಕಾಫ್ ವೈಫಲ್ಯ
ಸಾವಿನ ಸಂಖ್ಯೆ: 346
ಅಮೆರಿಕದ ಎರಡು ಬೋಯಿಂಗ್ 747
ಸ್ಥಳ: ಟೆನೆರಿಫ್ ವಿಮಾನ ನಿಲ್ದಾಣ
ದಿನಾಂಕ: 1977
ಕಾರಣ: ರನ್‌ವೇನಲ್ಲಿ ಮುಖಾಮುಖಿ ಡಿಕ್ಕಿ
ಸಾವಿನ ಸಂಖ್ಯೆ: 583
ಅಮೆರಿಕದ ಎಫ್6ಎಫ್3
ಸ್ಥಳ: ನ್ಯೂಯಾರ್ಕ್
ದಿನಾಂಕ: ನವೆಂಬರ್, 1943
ಕಾರಣ: ನಿಲ್ದಾಣದಲ್ಲಿ ಇಳಿಸುವಾಗ ರನ್‌ವೇ ಬಿಟ್ಟು ಬೇರೆಡೆ ಇಳಿಸಿದ್ದು
ಸಾವಿನ ಸಂಖ್ಯೆ: 200
ಅಮೆರಿಕ ಏರ್‌ಲೈನ್ಸ್ ಡಿಸಿ-10
ಸ್ಥಳ: ಷಿಕಾಗೋ ವಿಮಾನ ನಿಲ್ದಾಣ
ದಿನಾಂಕ: ಮೇ25, 1979
ಕಾರಣ: ಟೇಕಾಫ್ ಆದ ಕೂಡಲೇ ಕಳಚಿದ ಇಂಜಿನ್
ಸಾವಿನ ಸಂಖ್ಯೆ: 273
ಎರಡು ಬೋಯಿಂಗ್ 737
ಸ್ಥಳ: ಡಬ್ಲಿನ್ ವಿಮಾನ ನಿಲ್ದಾಣ
ದಿನಾಂಕ: 8 ಅಕ್ಟೋಬರ್, 2014
ಕಾರಣ: ಎರಡು ವಿಮಾನಗಳ ರೆಕ್ಕೆಗಳು ಪರಸ್ಪರ ತಾಕಿ ಮುರಿದುಬಿದ್ದಿದ್ದು
ಸಾವಿನ ಸಂಖ್ಯೆ: ಜೀವಹಾನಿಯಿಲ್ಲ.
ಸೌದಿ ಅರೇಬಿಯಾ ಎಲ್-101
ಸ್ಥಳ: ರಿಯಾದ್ ವಿಮಾನ ನಿಲ್ದಾಣ
ದಿನಾಂಕ: ಆಗಸ್ಟ್ 19, 1980
ಕಾರಣ: ಟೇಕಾಫ್ ಆಗುವಾಗ ವಿಮಾನದೊಳಗೆ ಬೆಂಕಿ
ಸಾವಿನ ಸಂಖ್ಯೆ: 301
ಏರ್ ಇಂಡಿಯಾ ಏಕ್ಸ್‌ಪ್ರೆಸ್ 812
ಸ್ಥಳ: ಬಜ್ಬೆ ವಿಮಾನ ನಿಲ್ದಾಣ (ಮಂಗಳೂರು)
ದಿನಾಂಕ: 22 ಮೇ, 2010
ಕಾರಣ: ಇಳಿಯುವಾಗ ರನ್‌ವೇ ನಿಂದ ಹೊರಹೋಗಿ ಪ್ರಪಾತದಲ್ಲಿದ್ದ ಬಂಡೆ ಮೇಲೆ ಬಿದ್ದದ್ದು
ಸಾವಿನ ಸಂಖ್ಯೆ: 349