ರಾಮಲಿಂಗಾ ರೆಡ್ಡಿ ಸಾಂದರ್ಭಿಕ ಚಿತ್ರ 
ದೇಶ

ಸಾರಿಗೆ ಸಂಸ್ಥೆ ನಷ್ಟ: ತನಿಖೆಗೆ ನಕಾರ

ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ದಶಕಗಳಿಂದ ನಷ್ಟದಲ್ಲಿದ್ದರೂ...


ಬಸ್ ಪ್ರಯಾಣ ದರ ಇಳಿಕೆ ಸದ್ಯಕ್ಕೆ ಅಸಾಧ್ಯ

ಸಾರಿಗೆಗೆ ಸಂಬಂಧಿಸಿದ ತೆರಿಗೆ ಇಳಿದರೆ, ಸಬ್ಸಿಡಿ ಹೆಚ್ಚಿದರೆ ಮಾತ್ರ ಆ ಚಿಂತನೆ ಮಾಡಬಹುದು.

ಬೆಂಗಳೂರು:
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ದಶಕಗಳಿಂದ ನಷ್ಟದಲ್ಲಿದ್ದರೂ ಆ ಬಗ್ಗೆ ತನಿಖೆ ನಡೆಸುವುದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಿರಾಕರಿಸಿದ್ದಾರೆ.

ಈ ಎರಡು ಸಂಸ್ಥೆಗಳು ನಷ್ಟ ಅನುಭವಿಸಿತ್ತಿವೆ, ಇಲಾಖೆ ಮೇಲೆ ಸಚಿವರಿಗೆ ಹಿಡಿತ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬರೆದ ಪತ್ರಕ್ಕೆ ಉತ್ತರ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ನಿಗಮಗಳು ನಷ್ಟದಲ್ಲಿದ್ದವು.

ಅವನ್ನು ಲಾಭದಾಯಕ ಸಂಸ್ಥೆಯಾಗಿ ಪರಿವರ್ತಿಸಲು ಅವರಿಂದ ಸಾಧ್ಯವಾಗಲಿಲ್ಲ. ಹಾಗಾದರೆ ಇದು ಕುಮಾರಸ್ವಾಮಿ ಸರ್ಕಾರದ ವೈಫಲ್ಯವೇ? ಇದು ಆ ಕಾಲದಲ್ಲಿ ಆಡಳಿತ ಯಂತ್ರ ಸಂಪೂರ್ಣ ವಿಪಲವಾಗಿದ್ದನ್ನು ತೋರುವುದಿಪಲ್ಲವೇ? ನಿಮಗೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇತ್ತು ಎಂಬುದು ಇದರಿಂದ ವೇದ್ಯಾವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಸಂಪುಟದಲ್ಲಿ ಚಲುವರಾಯಸ್ವಾಮಿ ಸಾರಿಗೆ ಸಚಿವರಾಗಿದ್ದರು. ಆದರೆ ನೀವು ಈ ಬಗ್ಗೆ ಪ್ರಸ್ತಾಪಿಸಿರುವುದರಿಂದ ನಿಮ್ಮಲ್ಲೇ ಪ್ರಶ್ನೆ ಕೇಳುತ್ತೇನೆ. ಯಾವ್ಯಾವ ಸರ್ಕಾರದ ಅವಧಿಯಲ್ಲಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಎಷ್ಟೆಷ್ಟು ನಷ್ಟ ಅನುಭವಿಸಿದ್ದವು ಎಂಬ ಲೆಕ್ಕಾಚಾರವನ್ನು ನಿಮಗೆ ಕಳುಹಿಸಿಕೊಡುತ್ತೇನೆ ಎಂದು ಎದಿರೇಟು ನೀಡಿದರು.

ತನಿಖೆ ಇಲ್ಲ
ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಷ್ಟ ಅನುಭವಿಸುವುದಕ್ಕೆ ಕಾರಣರಾದವರ ವಿರುದ್ಧ ಇಲಾಖಾ ತನಿಖೆ ನಡೆಸುವುದಕ್ಕೆ ರಾಮಲಿಂಗಾ ರೆಡ್ಡಿ ಬಿಲ್‌ಕುಲ್ ಒಪ್ಪಲಿಲ್ಲ. ಈ ಬಗ್ಗೆ ಎಷ್ಟೇ ತಿರುಗಿಸಿ-ಮುರುಗಿಸಿ ಪ್ರಶ್ನೆ ಕೇಳಿದರೂ ಅದೆಲ್ಲ ಏಕೆ, ತನಿಖೆ ಏನೂ ಬೇಡ ಎಂಬ ಉತ್ತರ ಅವರಿಂದ ಲಭ್ಯವಾಯಿತು.

ಬಿಎಂಟಿಸಿ 1660ಕೋಟಿ ಆದಾಯ ಗಳಿಸಿದರೂ 147,95 ಕೋಟಿ ನಷ್ಟದಲ್ಲಿದೆ. 2004-05ರಿಂದಲೇ ಕೆಎಸ್‌ಆರ್‌ಟಿಸಿ ನಷ್ಟದಲ್ಲಿದೆ ಎಂದು ನೀವೇ ದಾಖಲೆ ಕೊಡುತ್ತಿದ್ದೀರಿ. ಸಾರ್ವಜನಿಕರ ಹಣ ಈ ಪ್ರಮಾಣದಲ್ಲಿ ದಶಕಗಳಿಂದಲೂ ಪೋಲಾಗುತ್ತಿರುವಾಗ ತನಿಖೆ ಸೂಕ್ತವಲ್ಲವೇ? ಹಿಂದಿನ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿಯಾಗಿ ಬಸ್ ಖರೀದಿಸಿದ್ದೇ ಇದಕ್ಕೆ ಕಾರಣವೇ ಎಂಬ ಪ್ರಶ್ನೆಗೂ ಉತ್ತಿರಿಸಿದ ಅವರು, ತನಿಖೆಗೆ ಸ್ಪಷ್ಚ ನಕಾರ ತೋರಿದರು.

ದರ ಇಳಿಕೆ ಇಲ್ಲ: ಇದರ ಜತೆಗೆ ಬಸ್ ಪ್ರಯಾಣ ದರ ಇಳಿಕೆ ಸದ್ಯಕ್ಕೆ ಅಸಾಧ್ಯ ಎಂದಿರುವ ಅವರು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಿದ್ದೇನೆ ಎಂದರು.

ಡೀಸೆಲ್ ದರ ಕಡಿಮೆ ಆಗಿದೆ. ಹೀಗಾಗಿ ಬಸ್ ಪ್ರಯಾಣ ದರ ಇಳಿಸುವಂತೆ ಬಿಜೆಪಿ ಆಗ್ರಹಿಸುತ್ತಿದೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲೂ ಪ್ರಯಾಣ ದರ ಇಳಿಕೆಯಾಗಿಲ್ಲ. ಅಷ್ಟೇ ಏಕೆ, ರೈಲು ಪ್ರಯಾಣ ದರವೂ ಇಳಿದಿಲ್ಲ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್ ಪ್ರಯಾಣ ದರ ಇಳಿಕೆ ಏಕೆ ಸಾಧ್ಯವಿಲ್ಲ ಎಂದು ನಾನು ಈಗಾಗಲೇ ವಿವರಿಸಿದ್ದೇನೆ. ಪ್ಲೀಟ್ ಬಳಕೆ ಮತ್ತು ಅದಕ್ಕೆ ಸಂಬಂಧಿಸಿದ ತೆರಿಗೆ ಇಳಿಸುವ ಜತೆಗೆ ವಿದ್ಯಾರ್ಥಿ ಬಸ್ ಪಾಸ್ ಹಾಗೂ ಇನ್ನಿತರ ಸೇವೆಗೆ ನೀಡುವ ಸಬ್ಸಿಡಿ ಹೆಚ್ಚಿಸಿದರೆ ಪ್ರಯಾಣ ದರ ಇಳಿಕೆ ಬಗ್ಗೆ ಚಿಂತನೆ ನಡೆಸಬಹುದು ಎಂದು ಹೇಳಿದರು.

ಮುಸುಕಿನ ಗುದ್ದು ನೀಡಿ ಅಭ್ಯಾಸವಿಲ್ಲ
ನನಗೆ ರಾಜಕೀಯವಾಗಿ ಯಾರಿಗೂ ಮುಸುಕಿನ ಗುದ್ದು ನೀಡಿ ಅಭ್ಯಾಸವಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ ಪರೋಕ್ಷವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರಿಗೆ ಟಾಂಗ್ ನೀಡಿದ್ದಾರೆ. ಎಐಸಿಸಿ ಪುನಾರಚನೆ ಸಂದರ್ಭದಲ್ಲಿ ಉತ್ಸಾಹಿಗಳಿಗೆ ಅವಕಾಶ ನೀಡಿ ಕೆಲಸಕ್ಕೆ ಬಾರದವರನ್ನು ಕೈ ಬಿಡಬೇಕೆಂದು ಬೆಂಗಳೂರು ನಗರ ಪ್ರತಿನಿಧಿಸುವ ಸಚಿವರು ಪತ್ರ ಬರೆದಿದ್ದಾರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ನಾನು ಹರಿಪ್ರಸಾದ್ ಅವರನ್ನು ಗುರಿಯಾಗಿಸಿಕೊಂಡು ಯಾವುದೇ ಪತ್ರವನ್ನು ಸೋನಿಯಾ ಗಾಂಧಿಯವರಿಗೆ ಬರೆದಿಲ್ಲ. ನನಗೆ ಮುಸುಕಿನ ಗುದ್ದು ನೀಡಿ ಅಭ್ಯಾಸವಿಲ್ಲ. ಯಾರ ಬಗ್ಗೆಯಾದರೂ ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ ಎಂದರು.

ಕಸ ವಿಲೇವಾರಿಗೆ ಆರು ಘಟಕ
ನಗರದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ರಾಜ್ಯ ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ದೊಡ್ಡಬಳ್ಳಾಪುರ ಸಮೀಪದ ಚಿಗರನಹಳ್ಳಿ ಬಳಿ ಎಂಎಸ್‌ಡಿಬಿ ಹಾಗೂ ಟೆರ್ರಾ ಫಾರಂ ತಮ್ಮ ಘಟಕದ ಸಾಮರ್ಥ್ಯ ವಿಸ್ತರಣೆಗೆ ಮುಂದಾಗಿವೆ. ಇದಕ್ಕಾಗಿ ಹಣಕಾಸು ನೆರವು ನೀಡಲು ಸರ್ಕಾರ ನಿರ್ಧರಿಸಿದೆ.

ಜತೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಘಟಕ ನಿರ್ಮಾಣಕ್ಕೆ ನಿರ್ಧರಿಸಿದ್ದು, 2 ಘಟಕಗಳು ಭೂ ವಿವಾದ ಹಿನ್ನೆಲೆಯಲ್ಲಿ ಸ್ಥಗಿತವಾಗಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಲಿಂಗಬೀರನಹಳ್ಳಿ, ದೊಡ್ಡಬಿದರಕಲ್ಲು, ಕನ್ನಳ್ಳಿ, ಸೀಗೆಹಳ್ಳಿ, ಚಿಕ್ಕನೀಗಮಂಗಲ, ಸುಬ್ರಾಯನಪಾಳ್ಯದಲ್ಲಿ ಘಟಕ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಮೂರ್ನಾಲ್ಕು ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳುತ್ತದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡುವುದಿಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!