ಸಾಂದರ್ಭಿಕ ಚಿತ್ರ 
ದೇಶ

ಎಚ್‌ಐವಿ ಸೋಂಕಿತನಿಂದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

ಎಚ್‌ಐವಿ ಪಾಸಿಟೀವ್ ವ್ಯಕ್ತಿಯೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ...

ಮುಂಬೈ: ಎಚ್‌ಐವಿ ಪಾಸಿಟೀವ್ ವ್ಯಕ್ತಿಯೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಎಚ್‌ಐವಿ ಸೋಂಕಿತ ವ್ಯಕ್ತಿ ಸಹೋದರ ಸಂಬಂಧಿಯ ಮಗಳಾದ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದಾನೆ. ಈ ವೇಳೆ ಬಾಲಕಿ ಕಿರುಚಾಡಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಈ ಹಿನ್ನಲೆಯಲ್ಲಿ ಆಕೆಗೆ ಮನಬಂದಂತೆ ಆತ ಥಳಿಸಿದ್ದಾನೆ.

ನವೆಂಬರ್ 2ರಂದು ಅಂಧೇರಿಯಲ್ಲಿ ಘಟನೆ ನಡೆದಿದೆ. ವ್ಯಕ್ತಿಯು ಬಾಲಕಿಗೆ ದೂರದ ಸಂಬಂಧದಿಂದ ಚಿಕ್ಕಪ್ಪನಾಗಬೇಕು. ಆತ 15 ವರ್ಷಗಳಿಂದ ಕುಟುಂಬ ಸದಸ್ಯರಿಗೆ ಬಲ್ಲವನಾಗಿದ್ದು, ನೆರೆ ಮನೆಯವನಾಗಿದ್ದ. ಇತ್ತೀಚೆಗಷ್ಟೇ ಬಾಲಕಿಯ ಪೋಷಕರು ಆತನಿಗೆ ಒಂದು ಕೊಠಡಿ ಬಾಡಿಗೆ ನೀಡಿದ್ದರು. ಆತನ ಬಳಿ ಬಾಡಿಗೆ ಹಣ ತೆಗೆದುಕೊಂಡು ಬರುವಂತೆ ಬಾಲಕಿಯನ್ನು ಕಳುಹಿಸಿದ್ದರು.

ಬಾಡಿಗೆ ಹಣ ಕೇಳಲು ಬಾಲಕಿ ರೂಮಿಗೆ ಬಂದಾಗ, ಕೊಠಡಿಯ ಬಾಗಿಲು ಮುಚ್ಚಿದ್ದ ಎಚ್‌ಐವಿ ಸೋಂಕಿತ ಆಕೆಯ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದಾನೆ. ಬಾಲಕಿ ಹೆದರಿ ಚೀರಿಕೊಂಡು, ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಬಾಲಕಿ ಚೀರುವುದನ್ನು ಕಂಡು ಆತ ಆಕೆಗೆ ಮನಬಂದಂತೆ ಥಳಿಸಿದ್ದಾನೆ.

ಆಕೆಯೇ ಬಾಗಿಲು ತೆಗೆದು ಮನೆಗೆ ಓಡಿ ಬಂದು ಪೋಷಕರಿಗೆ ನಡೆದ ಘಟನೆಯನ್ನು ತಿಳಿಸಿದ್ದಾಳೆ. ಎಚ್‌ಐವಿ ಸೋಂಕಿತನ ಮೊದಲ ಪತ್ನಿ ಈಗಾಗಲೇ ಎಚ್‌ಐವಿ ಕಾಯಿಲೆಯಿಂದ ಮೃತಪಟ್ಟಿದ್ದಳು.

ಇದರಿಂದ ಗಾಬರಿಯಾದ ಪೋಷಕರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯರು ಸೋಂಕು ವಿರೋಧಿ ಔಷಧಿಯನ್ನು ನೀಡಿದ್ದು, ಸದ್ಯದಲ್ಲೇ ಬಾಲಕಿ ಸೋಂಕಿನಿಂದ ಪಾರಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ED ಶಾಕ್​: ಮನೆ, ಕಚೇರಿ ಸೇರಿದಂತೆ 13ಕ್ಕೂ ಹೆಚ್ಚು ಕಡೆ ದಾಳಿ

Toxic: ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ರಾ ನಯನತಾರಾ? ಫೋಟೋ ವೈರಲ್!

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಮಂಕಿಮ್ಯಾನ್'; ಜ್ಯೋತಿರಾಜ್ ಕೈ ಹಿಡಿಯುತ್ತಿರುವ ಯುವತಿ ಯಾರು ಗೊತ್ತಾ?

‘Dimagi Naxal’ ವಿವಾದ: ‘ಕಾಂಗ್ರೆಸ್‌ ಮಾವೋವಾದಿ ಪಕ್ಷವಾಗಿ ಬದಲಾಗುತ್ತಿದೆ’: ಕಿರಣ್‌ ರಿಜಿಜು ವಾಗ್ದಾಳಿ

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!