ದೇಶ

ಪಾನ್‌ವಾಲಗೂ ಅವಕಾಶ

Mainashree

ನವದೆಹಲಿ: 'ಕೇಂದ್ರ ಸಚಿವರು ಪಾನ್‌ವಾಲರನ್ನೂ ಆಪ್ತ ಕಾರ್ಯದರ್ಶಿಗಳನ್ನಾಗಿ ನೇಮಿಸಬಹುದು!' ಹಿಗೆಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸಚಿವರ ಆಪ್ತ ಕಾರ್ಯದರ್ಶಿಯರನ್ನಾಗಿ ನೇಮಿಸುವ ಬಗ್ಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಲು ನ್ಯಾ. ಬಿ.ಡಿ ಅಹ್ಮದ್ ಮತ್ತು ನ್ಯಾ.ಎಸ್ ಮೃದಲ್ ನೇತೃತ್ವದ ಪೀಠ ಹೇಳಿದೆ.

ಕೇಂದ್ರದ ಸುತ್ತೋಲೆ ಪ್ರಶ್ನಿಸಿ ಎನ್‌ಜಿಒ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಹುದ್ದೆಗೆ ಜಾಹೀರಾತು ನೀಡದೆ ಇರಬಹುದು. ಜತೆಗೆ ಕೇಂದ್ರ ಸಚಿವರೊಬ್ಬರು ಆಪ್ತ ಕಾರ್ಯದರ್ಶಿ ನೇಮಕ ಮಾಡಿಕೊಳ್ಳದೇ ಇರಬಹುದು.

ಸಚಿವರಾದವರು ಪಾನ್‌ವಾಲಾನನ್ನೂ ಹುದ್ದೆಗೆ ನೇಮಿಸಬಹುದು. ನೀವು(ಅರ್ಜಿದಾರರು) ಕೇಂದ್ರದ ಆದೇಶವನ್ನು ಸಂಕುಚಿತ ದೃಷ್ಟಿಯಿಂದ ಏಕೆ ನೋಡುತ್ತೀರಿ ಎಂದು ಕೇಳಿದೆ.

SCROLL FOR NEXT